ಬುಧವಾರ, ಮೇ 12, 2021
18 °C

ಡೊಳ್ಳಿನ ಸ್ಪರ್ಧೆ: ಬೆಳಗಾವಿ, ಮುಂಡರಗಿ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡವಿಸೋಮಾಪುರ (ಗದಗ ತಾ.): ಸ್ಪರ್ಧೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಅಗತ್ಯ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಪ್ರಲ್ಹಾದ ಹೊಸಳ್ಳಿ ಹೇಳಿದರು.ಗ್ರಾಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಜನ್ಮದಿನದ ಅಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಮಿತಿ ಹಾಗೂ ಬೀರಲಿಂಗೇಶ್ವರ ಸೇವಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಜ್ಯಮಟ್ಟದ ಡೊಳ್ಳಿನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಸೋಲು ಮತ್ತು ಗೆಲುವನ್ನು ಕ್ರೀಡಾ ಮನೋಭಾವನೆ ಸ್ವೀಕರಿಸಬೇಕು. ಎಲ್ಲದಕ್ಕಿಂತ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು.ಗದುಗಿನ ಕೆಎಸ್‌ಎಸ್ ಕಾಲೇಜಿನ ಪ್ರೊ. ಡಾ. ಸಿದ್ದಣ್ಣ ಜಕಬಾಳ, ರಾಣೇಬೆನ್ನೂರ ಸಂಗೀತ ಡಿಂಡಿಮ ಕಾಲೇಜಿನ ಪ್ರಾಚಾರ್ಯ ಕೆ. ಸಿ. ನಾಗರಾಜ್ಜಿ, ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದ ವೀರಣ್ಣ ಅಂಗಡಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಸಮಿತಿ ರಾಜ್ಯ ಉಪಾಧ್ಯಕ್ಷ ಅರುಣ ಅಣ್ಣಿಗೇರಿ, ಮಲ್ಲಪ್ಪ ಗಡ್ಡೆ, ಲಕ್ಕಪ್ಪ ಚಿಂಗಳಿ, ಈರಪ್ಪ ಹೊಸಳ್ಳಿ, ಶಂಕ್ರಪ್ಪ ಹೊಸಳ್ಳಿ ಪಾಲ್ಗೊಂಡಿದ್ದರು.ಫಲಿತಾಂಶ: ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡೋಣಿ ಗ್ರಾಮದ ಬೀರಲಿಂಗೇಶ್ವರ ಡೊಳ್ಳಿನ ಮೇಳ ಹಾಗೂ ಬೆಳಗಾವಿ ಜಿಲ್ಲೆಯ ಅವರಾದಿಯ ಓಂ ಫಲಹಾರೇಶ್ವರ ಡೊಳ್ಳಿನ ಮೇಳಗಳು ಸಮಾನ ಅಂಕ ಪಡೆದು ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡವು.ಬಾಗಲಕೋಟೆ ಜಿಲ್ಲೆಯ ಶ್ರೀಕಾಂತಗೌಡ್ರ ಸೋಮನಕೊಪ್ಪ ಸಂಗಡಿಗರು ದ್ವಿತೀಯ, ವಿಜಾಪುರ ಜಿಲ್ಲೆಯ ಪಡಾನೂರ ಲಗಮಾದೇವಿ ಡೊಳ್ಳಿನ ಮೇಳ ತೃತೀಯ, ಡಂಬಳದ ಹುಲಗಪ್ಪ ಜೊಂಡಿ ಸಂಗಡಿಗರು ಹಾಗೂ ಬೆಳಗಾವಿ ಜಿಲ್ಲೆಯ ಬಳಗಾನೂರ ಡೊಳ್ಳಿನ ಮೇಳದವರು ಸಮಾನ ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಹಂಚಿಕೊಂಡರು. ಶಿರಹಟ್ಟಿಯ ಬೀರೇಶ್ವರ ಸೇವಾ ಸಮಿತಿ ಐದನೇ ಸ್ಥಾನ ಪಡೆದುಕೊಂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.