ಢಾಕಾ: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿರುವ ದಕ್ಷಿಣ ಆಫ್ರಿಕಾ ತಂಡದವರು ಸೋಮವಾರ ನಗರದಲ್ಲಿ ತಮ್ಮ ಪತ್ನಿ ಹಾಗೂ ಗೆಳತಿಯರ ಜೊತೆ ಶಾಪಿಂಗ್ನಲ್ಲಿ ತೊಡಗಿದ್ದರು. ತಮ್ಮ ಪಂದ್ಯಕ್ಕೆ ಇನ್ನೂ ನಾಲ್ಕು ದಿನಗಳ ಕಾಲಾವಕಾಶ ಇರುವ ಕಾರಣ ಆಟಗಾರರು ಅಭ್ಯಾಸಕ್ಕೆ ಬರಲಿಲ್ಲ. ಬದಲಾಗಿ ಹೋಟೆಲ್ನ ಜಿಮ್ನಲ್ಲಿ ದೈಹಿಕ ಕಸರತ್ತು ನಡೆಸಿದರು. ಬಳಿಕ ಶಾಪಿಂಗ್ಗೆ ತೆರಳಿದರು.

‘ಕೆಲ ಆಟಗಾರರು ಹೋಟೆಲ್ನ ಜಿಮ್ನಲ್ಲಿ ದೈಹಿಕ ಕಸರತ್ತು ನಡೆಸಿದರು. ಇನ್ನು ಕೆಲವರು ಶಾಪಿಂಗ್ಗೆ ತೆರಳಿದ್ದರು. ನಮ್ಮ ಆಟಗಾರರು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಅಭ್ಯಾಸ ನಡೆಸಲಿದ್ದಾರೆ’ ಎಂದು ಈ ತಂಡದ ಮಾಧ್ಯಮ ಮ್ಯಾನೇಜರ್ ಲೆರಟೊ ಮಾಲೆ ಕುಟು ಸೋಮವಾರ ತಿಳಿಸಿದರು. ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಗ್ರೇಮ್ ಸ್ಮಿತ್ ಪಡೆ ಆಡಿದ ಐದು ಪಂದ್ಯಗಳಿಂದ ಹತ್ತು ಪಾಯಿಂಟ್ ಹೊಂದಿದೆ. ‘ಎ’ ಗುಂಪಿನಲ್ಲಿ ಕೊನೆಯ ಸ್ಥಾನ ಗಳಿಸಿರುವ ನ್ಯೂಜಿಲೆಂಡ್ ತಂಡದವರು ಮಂಗಳವಾರ ಮಧ್ಯಾಹ್ನ ಎರಡು ಗಂಟೆಗೆ ಅಭ್ಯಾಸ ಶುರು ಮಾಡಲಿದ್ದಾರೆ. ಈ ತಂಡಗಳ ಕ್ವಾರ್ಟರ್ ಫೈನಲ್ ಮಾರ್ಚ್ 25ರಂದು ಮಿರ್ಪುರದ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.