ನೋಯಿಡಾ (ಪಿಟಿಐ): ಮಾನಸಿಕ ಅಸ್ವಸ್ಥತೆಯಿಂದ ಸ್ವಯಂ ಗೃಹ ಬಂಧನದಲ್ಲಿದ್ದ ಸೋದರಿಯರಲ್ಲಿ ತಂಗಿ ಸೋನಾಲಿ ಆರೋಗ್ಯ ಸ್ಥಿರವಾಗಿದೆಯಾದರೂ ರಕ್ತದೊತ್ತಡ ಏರುಗತಿಯಲ್ಲಿದೆ ಎಂದು ಕೈಲಾಶ್ ಆಸ್ಪತ್ರೆಯ ವೈದರು ಗುರುವಾರ ತಿಳಿಸಿದ್ದಾರೆ.

ಸೋನಾಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದು, ಈಕೆಯ ಅಕ್ಕ ಅನುರಾಧಾ ಬುಧವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತಮ್ಮ ಪೋಷಕರು ಸಾವಿನ ಆಘಾತದಿಂದ ಇವರಿಬ್ಬರು ಖಿನ್ನತೆಗೆ ಒಳಗಾಗಿದ್ದರು. ಪೋಷಕರ ಅಗಲಿಕೆ ನಂತರ ಸೋದರ ವಿಪಿನ್ಬೆಹಲ್ ಇವರಿಂದ ದೂರವಾಗಿದ್ದರು. 6 ತಿಂಗಳ ಹಿಂದೆ ನೆಚ್ಚಿನ ನಾಯಿ ಸತ್ತ ಮೇಲೆ ಸೋದರಿಯರು ಅಪಾರ್ಟ್ಮೆಂಟ್ನಲ್ಲಿ ಸ್ವಯಂ ಗೃಹ ಬಂಧನದಲ್ಲಿದ್ದರು. ಹೊಟ್ಟೆಗಿಲ್ಲದೆ ಬಳಲುತ್ತಿದ್ದ ಇವರ ಬಗ್ಗೆ ಪೊಲೀಸರಿಗೆ ಜನರು ಮಾಹಿತಿ ನೀಡಿ, ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದರು. ಪ್ರಕರಣ ಬಗ್ಗೆ ನ್ಯಾಯಾಂಗ ತನಿಖೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.