ತಂತ್ರಜ್ಞಾನ ಸದ್ಬಳಕೆಯಾಗಲಿ- ಸಂಸದ ಉದಾಸಿ

ಸೋಮವಾರ, ಮೇ 27, 2019
33 °C

ತಂತ್ರಜ್ಞಾನ ಸದ್ಬಳಕೆಯಾಗಲಿ- ಸಂಸದ ಉದಾಸಿ

Published:
Updated:

ಹಾನಗಲ್ಲ: `ಪ್ರಸ್ತುತ ದೇಶದಾದ್ಯಂತ ಸುಮಾರು 85 ಕೋಟಿ ಮೋಬೈಲ್ ಪೋನ್‌ಗಳು ಬಳಕೆಯಲ್ಲಿದ್ದು, 3ಜಿ, 4ಜಿ ಸೇರಿದಂತೆ ಮುಂಬರುವ ದಿನಗಳಲ್ಲಿನ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಯುವಕರು ಸದ್ಬಳಕೆ ಮಾಡಿಕೊಂಡು ತಾವಿದ್ದ ಸ್ಥಳದಿಂದಲೇ ಅಗತ್ಯವಾದ ಶಿಕ್ಷಣವನ್ನು ಪಡೆಯಬಹುದಾಗಿದೆ~ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.ತಾಲ್ಲೂಕಿನ ಕೂಸನೂರಿನಲ್ಲಿ ಸೋಮ ವಾರ ಸರಕಾರಿ ಪಿಯು ಕಾಲೇಜ್ ಕಟ್ಟಡದ ಮೊದಲ ಮಹಡಿ ಉದ್ಘಾಟನೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಕಟ್ಟಡದ ಮಹಡಿ ಉದ್ಘಾಟಿಸಿ ಮಾತನಾಡಿದ ಲೋಕೋಪಯೋಗಿ ಸಚಿವ ಸಿ..ಎಂ.ಉದಾಸಿ, ಸ್ವಾತಂತ್ರ್ಯಾ ನಂತರದ ಸರಕಾರಗಳು ಶಿಕ್ಷಣಕ್ಕೆ ಆದ್ಯತೆ ನೀಡಿದ್ದರೆ. ಇಂದು ಭಾರತ ಜಗತ್ತಿನ ಮುಂದುವರೆದ ರಾಷ್ಟ್ರಗಳಲ್ಲಿ ಪ್ರಥಮ ಪಂಕ್ತಿಯಲ್ಲಿರುತ್ತಿತ್ತು ಎಂದರು. ಸದ್ಯದಲ್ಲಿ ತಾಲ್ಲೂಕಿನ ತಿಳವಳ್ಳಿಯಲ್ಲಿ ಪ್ರಥಮ ದರ್ಜೆ ಕಾಲೇಜ್ ಪ್ರಾರಂಭಿ ಸಲಾಗುವುದು ಎಂದರು.ಜಿ.ಪಂ ಸದಸ್ಯ ಬಸವರಾಜ ಹಾದಿ ಮನಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಕೂಸನೂರ ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಕುರುಬರ ಅಧ್ಯಕ್ಷತೆ ವಹಿಸಿದ್ದರು.ತಾ.ಪಂ ಅಧ್ಯಕ್ಷೆ ಲಲಿತಾ ಹಿರೇ ಮಠ, ಉಪಾಧ್ಯಕ್ಷ ನಿಂಗಪ್ಪ ಗೊಬ್ಬೇರ, ಸದಸ್ಯೆ ಕಲ್ಪನಾ ಬ್ಯಾತನಾಳ, ಗ್ರಾ.ಪಂ ಉಪಾ ಧ್ಯಕ್ಷೆ ರೂಪಾ ಬಂಕೊಳ್ಳಿ, ಎಂಜನಿಯರ್ ಕೆ.ಶಿವಣ್ಣ, ಕಾಲೇಜು ಪ್ರಾಚಾರ್ಯ ಎಸ್.ಓ. ಬಾಸುತ್ಕರ್ ವೇದಿಕೆ ಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry