ಗುರುವಾರ , ಮೇ 19, 2022
25 °C

ತಜ್ಞರ ತಂಡ ಭೇಟಿ: ತೀವ್ರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಟ್ಟಿ ಚಿನ್ನದ ಗಣಿ:  ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿ ಆಡಳಿತ ಸರಿಯಾಗಿ ಕೊಳವೆಬಾವಿಗಳನ್ನು ಪರಿಶೀಲಿಸದೆ ಅರ್ಸೆನಿಕ್‌ಯುಕ್ತ ನೀರು ಎಂದು ನಾಮಫಲಕ ಹಾಕಲಾಗಿದೆ ಎಂದು ಕರ್ನಾಟಕ ರೈತ ಸಂಘದ ಮುಖಂಡ ಶೇಖರಯ್ಯ ಅಸಮಾಧಾನ ವ್ಯಕ್ತಪಡಿಸಿದರು.ಇಲ್ಲಿಗೆ ಸಮೀಪದ ಗೆಜ್ಜಲಗಟ್ಟಾ ಗ್ರಾಮಕ್ಕೆ ಅರ್ಸೆನಿಕ್‌ಯುಕ್ತ ನೀರಿನ ಕುರಿತು ಪರಿಶೀಲಿಸಲು ಮಂಗಳವಾರ ಭೇಟಿ ನೀಡಿದ ತಜ್ಞರ ತಂಡದೊಂದಿಗೆ ಮಾತನಾಡಿ, ಗ್ರಾಮದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಇದೆ. ನೀರಿನ ಘಟಕಗಳು ಆರಂಭಿಸಲು ವಿರೋಧವಿಲ್ಲ. ಆದರೆ ಈ ಕಾರ್ಯ ಖಾಸಗಿಯವರಿಗೆ ನೀಡುವುದರ ಬದಲು ಸರ್ಕಾರವೇ ಈ ಘಟಕಗಳನ್ನು ನಡೆಸಬೇಕು. ಸರ್ಕಾರ ನೀರು ಪೂರೈಸಲು ಅಸರ್ಮಥವಾಗಿದೇಯೆ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ನಂತರ ಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಜ್ಞತಂಡ ಹಟ್ಟಿ ಗಣಿಯ ಅದಿರಿನ ತ್ಯಾಜ್ಯದಿಂದ ಸುತ್ತಲಿನ ಗ್ರಾಮಗಳಲ್ಲಿ ನೀರಿನಲ್ಲಿ ಅರ್ಸೆನಿಕ್ ರಾಸಾಯನಿಕ ಸೇರುವ ಸಾಧ್ಯತೆಗಳಿವೆ. ಆದುದರಿಂದ ಈ ನಿಟ್ಟಿನಲ್ಲಿ ಚಿನ್ನದ ಗಣಿ ಕಂಪೆನಿ ಸಹಾಯ ನೀಡಬೇಕೆಂದು ಗಣಿ ಆಡಳಿತಾಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಲವು ಗ್ರಾಮಗಳಲ್ಲಿ ನೀರಿಗಾಗಿ ಪರ್ಯಾಯ ವ್ಯವಸ್ಥೆ ಮಾಡದೆ ಕೊಳವೆ ಬಾವಿಗಳು ಮುಚ್ಚಿಸಿದ್ದಾರೆ. ಈಗಿರುವ ಕೊಳವೆ ಬಾವಿಯಲ್ಲಿ ಸಿಗುವ ನೀರನ್ನು ಬಟ್ಟೆ ಒಗೆಯಲು ಉಪಯೋಗಿಸಬಹುದು ಎಂದು ತಂಡದ ಸದಸ್ಯರಾದ ಡಾ. ಸುದರ್ಶನ್ ಸಲಹೆ ನೀಡಿದರು. ಡಾ.ಸಾಹುಕಾರ, ಯೋಗೀಶ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಟಿ. ಜ್ಞಾನಪ್ರಕಾಶ ಹಾಗೂ ಇತರ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.