ಸೋಮವಾರ, ಮೇ 23, 2022
20 °C

ತನಿಖೆಗೆ ಒಪ್ಪಿಕೊಳ್ಳಿ; ಸಿರಿಯಾಕ್ಕೆ ಬಾನ್ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ (ಪಿಟಿಐ):`ನಾಗರಿಕರ ಹತ್ಯೆ ನಿಲ್ಲಿಸಬೇಕು. ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಅಂತರ ರಾಷ್ಟ್ರೀಯ ತನಿಖೆಗೆ ಒಪ್ಪಿಕೊಳ್ಳಬೇಕು~ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸದ್ ಅವರಿಗೆ ಸೂಚಿಸಿದ್ದಾರೆ.`ಮೂರು ಸಾವಿರಕ್ಕಿಂತ ಹೆಚ್ಚು ನಾಗರಿಕರ ಹತ್ಯೆಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಾಗುವುದಿಲ್ಲ. ಕೂಡಲೇ ಇದು ಕೊನೆಗಾಣಬೇಕು. ಅಂತರರಾಷ್ಟ್ರೀಯ ತನಿಖೆಗೆ ಒಪ್ಪಿಕೊಂಡು ಮಾತುಕತೆಗೆ ಮುಂದಾಗಬೇಕು~ ಎಂದು ಅವರು ಸಲಹೆ ಮಾಡಿದ್ದಾರೆ.

ದೇಶದಲ್ಲಿ ತಲೆದೋರಿರುವ ಪರಿಸ್ಥಿತಿಯನ್ನು ಶಮನಗೊಳಿಸಲು ಕೂಡಲೇ ರಾಜಕೀಯ ಸುಧಾರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಮಂಡಳಿಯ ಆಯೋಗದ ತನಿಖೆಗೆ ಸಮ್ಮತಿ ಸೂಚಿಸಬೇಕು ಎಂದು ಅವರು ಹೇಳಿದ್ದಾರೆ.`ಸಿರಿಯಾದಲ್ಲಿ ಸೇನೆಯನ್ನು ಬಳಸಿ ನಾಗರಿಕರ ಹತ್ಯೆ ಮಾಡುತ್ತಿರುವುದನ್ನು ತಡೆಗಟ್ಟಲು ಅಂತರರಾಷ್ಟ್ರೀಯ ಸಮುದಾಯ ಕ್ರಮಕ್ಕೆ ಮುಂದಾಗಬೇಕು~ ಎಂದು ಕಳೆದ ವಾರವಷ್ಟೇ ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯಲ್ಲಿರುವ ರಾಜತಾಂತ್ರಿಕ ನವಿ ಪಿಳ್ಳೈ ಆಗ್ರಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.