ಲಂಡನ್ (ಪಿಟಿಐ): `ಅಮೆರಿಕದ ಗುಪ್ತಚರ ಸಂಸ್ಥೆಗಳು ವಿಶ್ವದ ಪ್ರಮುಖ ಅಂತರ್ಜಾಲ ತಾಣಗಳಿಂದ ಪಡೆದ ವೈಯಕ್ತಿಕ ಮಾಹಿತಿಗಳನ್ನು ಬ್ರಿಟನ್ ಭದ್ರತಾ ಸಂಸ್ಥೆಗಳು ರಹಸ್ಯವಾಗಿ ಸಂಗ್ರಹಿಸುತ್ತಿವೆ' ಎಂಬ ದೂರಿಗೆ ಸಂಬಂಧಿಸಿ ತನಿಖೆಗೆ ಆದೇಶಿಸುವಂತೆ ಬ್ರಿಟನ್ ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಿದೆ.

ಈ ಸಂಬಂಧ ಬ್ರಿಟನ್ನಿನ ರಹಸ್ಯ ಮಾಹಿತಿ ಸಂಗ್ರಹ ಕೇಂದ್ರ `ಜಿಸಿಎಚ್ಕ್ಯು' ಸಂಸತ್ನ ಬೇಹುಗಾರಿಕೆ ಹಾಗೂ ಭದ್ರತಾ ಸಮಿತಿಗೆ ಸೋಮವಾರದೊಳಗೆ ವರದಿ ಸಲ್ಲಿಸಲಿದೆ.

ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯಿಂದ ಮಾಹಿತಿ ಪಡೆಯುವುದಕ್ಕೆ `ಜಿಸಿಎಚ್ಕ್ಯು' ನೇರವಾಗಿ ಮನವಿ ಮಾಡಿಕೊಂಡಿರಬಹುದು' ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

`ಜಿಸಿಎಚ್ಕ್ಯು' ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ವಿದೇಶಾಂಗ ಕಾರ್ಯದರ್ಶಿ ವಿಲಿಯಂ ಹೂಗ್ ಅಥವಾ ಗೃಹ ಕಾರ್ಯದರ್ಶಿ ಥೆರೆಸಾ ಮೇರಿ ಮೇ ಅವರು ಸಂಸತ್ನಲ್ಲಿ ಈ ಬಗ್ಗೆ ವಿವರಣೆ ನೀಡಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ.

`ಈ ರಹಸ್ಯ ಕಾರ್ಯಾಚರಣೆ ಬಗ್ಗೆ ಎಷ್ಟರ ಮಟ್ಟಿಗೆ ಗೊತ್ತಿದೆ ಹಾಗೂ ಬ್ರಿಟನ್ನಲ್ಲಿ ಎಷ್ಟು ಮಂದಿಯ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲಾಗಿದೆ ಎನ್ನುವುದನ್ನು ಇವರಿಬ್ಬರು ತಿಳಿಸಬೇಕು' ಎಂದೂ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.