ಸೋಮವಾರ, ಜೂಲೈ 13, 2020
25 °C

ತಪಸ್ವಿ ರಾವಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಪಸ್ವಿ ರಾವಣ

ಉದಯ ಕಲಾನಿಕೇತನ:  ಬುಧವಾರ ಕಲಾಕೇಸರಿ ಉದಯಕುಮಾರ್‌ರವರ ಜಯಂತೋತ್ಸವ ನಿಮಿತ್ತ ‘ತಪಸ್ವಿ ರಾವಣ’ (ರಚನೆ: ದಿ. ಉದಯಕುಮಾರ್. ರಂಗರೂಪ, ನಿರ್ದೇಶನ: ಯೋಗೇಶ್ ಮಾಸ್ಟರ್. ನೃತ್ಯ ಸಂಯೋಜನೆ: ರೇಣುಕಾಬಾಲಿ. ಬೆಳಕು: ಡಿ. ಭಾಸ್ಕರ್. ಪ್ರಸಾಧನ: ಆಲೆಮನೆ ಸುಂದರಮೂರ್ತಿ. ಕಲಾವಿದರು: ಕುಶಲ್‌ಕುಮಾರ್, ಸಂತೋಷ್ ಕೃಷ್ಣ, ಮಂಜುಳಾ ವರ್ಷಾ, ಜಯಕೀರ್ತಿ, ಮಮತಾ, ಪ್ರಜ್ಞಾ ಮುಂತಾದವರು) ನಾಟಕ.ಇದರಲ್ಲಿ ದಿ. ಉದಯಕುಮಾರ್ ಅವರು ರಾವಣನನ್ನು ಬರಿಯ ರಾಮನ ಶತ್ರುವನ್ನಾಗಿ ಪರಿಗಣಿಸದೇ ಒಬ್ಬ ಶಕ್ತಿಯುತ ವ್ಯಕ್ತಿಯನ್ನಾಗಿ ನೋಡಿದ್ದಾರೆ.ವ್ಯಕ್ತಿ ಸಹಜವಾದ ಗುಣಾವಗುಣಗಳ ಸಮೇತ ರಾವಣನ ವ್ಯಕ್ತಿತ್ವವನ್ನು ಪ್ರದರ್ಶಿಸಿದ್ದಾರೆ. ಆತನ ನಾಯಕನ್ನಾಗಿಯೋ ಅಥವಾ ಖಳನಾಯಕನಾಗಿಯೋ ಚಿತ್ರಿಸುವ ಆತುರವನ್ನು ಎಲ್ಲಿಯೂ ತೋರಿಲ್ಲ. ಬದಲಾಗಿ ರಂಗಭಾಷೆಗೆ ಒತ್ತು ಕೊಟ್ಟು ತಾವೂ ಆರಿಸಿರುವಂತಹ ಘಟನೆಗಳನ್ನು ಬಲಯುತವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ.ನಾಟಕದ ಹೆಸರು ತಪಸ್ವಿ ರಾವಣ ಎಂದಾದರೂ ಸುಗ್ರೀವ, ಮಾರುತಿ, ವಾಲಿ, ಜಟಾಯು, ಸೀತೆ ಮತ್ತು ಮಂಡೋದರಿ ಎಲ್ಲರೂ ಪ್ರಧಾನವಾಗಿ ಕಾಣಿಸುತ್ತಾರೆ. ರಾವಣೇಶ್ವರನ ಅಂತ್ಯದೊಂದಿಗೆ ಪ್ರಾರಂಭವಾಗುವ ನಾಟಕವು ಭಾಗವತದ ಜಿಜ್ಞಾಸೆಯೊಂದಿಗೆ ಮುಂದುವರಿದು ಘಟನೆಗಳಿಗೆ ತಾತ್ವಿಕ ಅರ್ಥವನ್ನು ನೀಡುತ್ತದೆ.ಉದಯ ಕಲಾನಿಕೇತನ ಸಾಂಸ್ಕೃತಿಕ ಕಲಾ ಪರಂಪರೆಯ ನಿರಂತರ ಸಂವಹನಕ್ಕಾಗಿ ದಿ. ಉದಯಕುಮಾರ್ ಸ್ಥಾಪಿಸಿದ ಸಂಸ್ಥೆ. ಉದಯೋನ್ಮುಖ ಕಲಾವಿದರಿಗೆ ವೇದಿಕೆ, ನೃತ್ಯ ತರಗತಿ, ರಂಗ ಕಾರ್ಯಾಗಾರಗಳನ್ನು ನಡೆಸುತ್ತಿದೆ. ಉದ್ಘಾಟನೆ: ಎಚ್.ವಿ.ರಾಮಚಂದ್ರರಾವ್, ಅತಿಥಿಗಳು: ತುಮಕೂರು ಶಿವಕುಮಾರ್. ಎಂ.ಎಸ್.ಕೋಟೆ ನಾಗಭೂಷಣ್. ಅಧ್ಯಕ್ಷತೆ: ಬಿ.ಟಿ.ಮುನಿರಾಜಯ್ಯ.

ಸ್ಥಳ: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ.

ಸಂಜೆ 6.30.            

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.