ಇಸ್ಲಾಮಾಬಾದ್ (ಐಎಎನ್ಎಸ್): 1990ರಲ್ಲಿ ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವಿವಿಧ ರಾಜಕಾರಣಿಗಳಿಗೆ ಹಣ ಒದಗಿಸಿದ್ದು ನಿಜ ಎಂದು ಐಎಸ್ಐನ ಮಾಜಿ ಮುಖ್ಯಸ್ಥ ಅಸದ್ ದುರಾನಿ ಸುಪ್ರೀಂಕೋರ್ಟ್ನಲ್ಲಿ ಒಪ್ಪಿಕೊಂಡಿದ್ದಾರೆ.

ರಾಜಕಾರಣಿಗಳಿಗೆ ಹಣ ಒದಗಿಸಿರುವ ಬಗ್ಗೆ ಮೆಹರನ್ ಬ್ಯಾಂಕಿನ ಮಾಜಿ ಮುಖ್ಯಸ್ಥ ಯೂನುಸ್ ಹಬೀಬ್ ನೀಡಿರುವ ಹೇಳಿಕೆ ನಿಜವಾದದ್ದು ಎಂದು ದುರಾನಿ ತಿಳಿಸಿದ್ದಾರೆ.

1990ರ ಚುನಾವಣೆಯಲ್ಲಿ ರಾಜಕಾರಣಿಗಳಿಗೆ ಹಣ ಒದಗಿಸಿದ ಹಗರಣದಲ್ಲಿ ಆಗಿನ ಅಧ್ಯಕ್ಷ ಗುಲಾಮ್ ಇಸಾಕ್ ಖಾನ್, ಸೇನೆಯ ಮಾಜಿ ಮುಖ್ಯಸ್ಥ ಅಸ್ಲಾಂ ಬೇಗ್ ಮತ್ತು ಐಎಸ್ಐ ಭಾಗಿಯಾಗಿದ್ದರ ಬಗ್ಗೆ ಹಬೀಬ್ ಗುರುವಾರ ಸುಪ್ರೀಂಕೋರ್ಟ್ನಲ್ಲಿ ಸಾಕ್ಷಿ ಹೇಳಿದ್ದರು.

ಪಾಕಿಸ್ತಾನ ಪೀಪಲ್ಸ್ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಇಸ್ಲಾಮಿ ಜಮೂರಿ ಇತ್ತೆಹಾದ್ ಪಕ್ಷದ ಅಭ್ಯರ್ಥಿಗಳಿಗೆ ಹಣ ಹಂಚಿದ ಹಗರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮೊಹಮ್ಮದ್ ಚೌದರಿ ನೇತೃತ್ವದ ಮೂವರು ನ್ಯಾಯಮುರ್ತಿಗಳ ಪೀಠವು ನಡೆಸುತ್ತಿದೆ.

ತೆಹರಿಕ್-ಇ-ಇಸ್ತಿಕ್ಲಾಲ್ನ ಮುಖ್ಯಸ್ಥ ಮತ್ತು ನಿವೃತ್ತ ಏರ್ಚೀಫ್ ಮಾರ್ಷಲ್ ಅಸ್ಗರ್ ಖಾನ್ ಅವರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ, 1990ರ ಚುನಾವಣೆಯಲ್ಲಿ ರಾಜಕಾರಣಿಗಳಿಗೆ ಐಎಸ್ಐ ಹಣ ಹಂಚಿತ್ತು ಎಂದು ದೂರಿದ್ದಾರೆ.

ಆಗಿನ ಸೇನಾ ಮುಖ್ಯಸ್ಥರ ಆದೇಶದಂತೆ ರಾಜಕಾರಣಿಗಳಿಗೆ ಹಣ ಹಂಚಲಾಗಿತ್ತು ಎಂದು ದುರಾನಿ ತಿಳಿಸಿದ್ದಾರೆ.

ಅಧ್ಯಕ್ಷರ ನಿವಾಸದಲ್ಲಿದ್ದ ಚುನಾವಣಾ ಘಟಕವು ಹಣ ಹಂಚುವ ನಿರ್ಧಾರ ತೆಗೆದುಕೊಂಡ ವಿಚಾರ ತಮಗೆ ತಿಳಿದಿತ್ತು ಮತ್ತು ಸೇನಾ ಮುಖ್ಯಸ್ಥರ ಆದೇಶ ಜಾರಿಗೆ ಅನೇಕ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು ಎಂದೂ ದುರಾನಿ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಲಿಖಿತ ಹೇಳಿಕೆಯನ್ನು ಸಲ್ಲಿಸುವಂತೆ ದುರಾನಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಈ ತಿಂಗಳ 14ಕ್ಕೆ ಮುಂದೂಡಿದೆ.

ಈ ಮಧ್ಯೆ ಸೇನೆಯ ನಿವೃತ್ತ ಮುಖ್ಯಸ್ಥ ಅಸ್ಲಾಂ ಬೇಗ್ ಹೇಳಿಕೆ ನೀಡಿ, ಬ್ಯಾಂಕಿನ ಮಾಜಿ ಮುಖ್ಯಸ್ಥ ಹಬೀಬ್ ಸುಪ್ರೀಂಕೋರ್ಟ್ನಲ್ಲಿ ನೀಡಿರುವ ಹೇಳಿಕೆ ಸತ್ಯ ದೂರವಾದುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.