ಗುರುವಾರ , ಜನವರಿ 30, 2020
19 °C
ತುರ್ತಾಗಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಅರ್ಜಿ

ತಮಿಳುನಾಡು ಮನವಿ ತಿರಸ್ಕರಿಸಿದ `ಸುಪ್ರೀಂ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮಿಳುನಾಡು ಮನವಿ ತಿರಸ್ಕರಿಸಿದ `ಸುಪ್ರೀಂ'

ನವದೆಹಲಿ (ಪಿಟಿಐ): ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತ ನ್ಯಾಯಮಂಡಳಿ ತೀರ್ಪನ್ನು ಜಾರಿಗೊಳಿಸಲು  ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂಬ ತನ್ನ ಅರ್ಜಿಯ  ವಿಚಾರಣೆಯನ್ನು ತುರ್ತಾಗಿ  ನಡೆಸಬೇಕೆಂಬ ತಮಿಳುನಾಡು ಸರ್ಕಾರದ ಮನವಿಯನ್ನು ಮಂಗಳವಾರ ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ ಅದಕ್ಕೆ `ಆತುರವಿಲ್ಲ' ಎಂದು ಹೇಳಿದೆ.`ತಮಿಳುನಾಡು ಮಾಡಿಕೊಂಡಿರುವ ಮನವಿಯಲ್ಲಿ ಯಾವುದೇ ತುರ್ತಿದೆ ಎಂದು ನಮಗೆ ಅನಿಸುತ್ತಿಲ್ಲ. ಈ ಅರ್ಜಿ ವಿಚಾರಣೆಯನ್ನು ನ್ಯಾಯಮಂಡಳಿ ನೀಡಿರುವ ತೀರ್ಪು ಕುರಿತಂತೆ ಸಲ್ಲಿಸಲಾಗಿರುವ ಸಿವಿಲ್ ಅರ್ಜಿಗಳೊಂದಿಗೆ ನಡೆಸಲಾಗುವುದು' ಎಂದು ನ್ಯಾಯಮೂರ್ತಿ ಆರ್.ಎಂ.ಲೋಧಾ ಅವರ ನೇತೃತ್ವದ ನ್ಯಾಯಪೀಠವು ಹೇಳಿತು.ಇದೇ ವೇಳೆ ನ್ಯಾಯಪೀಠವು ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತಂತೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಹೇಳಿತು.

ಪ್ರತಿಕ್ರಿಯಿಸಿ (+)