ಕೂಡ್ಲಿಗಿ: ಪಟ್ಟಣದ ಶುಕ್ರವಾರದ ಸಂತೆಯಲ್ಲಿ ತರಕಾರಿ ಬೆಲೆಗಳೆಲ್ಲ ಗಗನಕ್ಕೇರಿರುವುದು ಗ್ರಾಹಕರಿಗೆ ನುಂಗಲಾರದ ತುಪ್ಪವಾಗಿದೆ.

ತರಕಾರಿಗಳಲ್ಲಿ ಅತಿಹೆಚ್ಚು ಬೆಲೆ ಎಂದರೆ ಚವಳೆಕಾಯಿ. ಕಿಲೋ ಒಂದಕ್ಕೆ 30 ರೂಪಾಯಿ ಇರುವ ಚವಳೆಕಾಯಿಯನ್ನು ಗ್ರಾಹಕ ಕಣ್ತುಂಬ ನೋಡಿ ಸಂತಸಪಡಬೇಕಷ್ಟೆ. ಗ್ರಾಹಕರು ತರಕಾರಿ ಬೆಲೆ ಕೇಳಿದೊಡನೆ ಬೆಚ್ಚಿಬೀಳಬಾರದೆಂದು ಮಾರಾಟಗಾರರು `ಕಾಲು ಕೆ.ಜಿ ಚವಳೆಕಾಯಿ 8 ರೂ. ಮಾತ್ರ; ಎಂದಷ್ಟೇ ಹೇಳುತ್ತಾರೆ.

ಈರುಳ್ಳಿ 15 ರೂ.ಗಳಿಗೆ ಕೆ.ಜಿಯಾಗಿರುವುದು ಗ್ರಾಹಕರು ದಿಕ್ಕುತೋಚದಂತಾಗಿದೆ. ಟೊಮೆಟೊ ಬೆಲೆ 16 ರೂ., ಬದನೆಕಾಯಿ 20 ರೂ., ಮೆಣಸಿನಕಾಯಿ 20 ರೂ., ಸೌತೆಕಾಯಿ 16 ರೂ. ಹೀರೇಕಾಯಿ 20 ರೂ.ಗಳಾಗಿದ್ದು, ಪಟ್ಟಣದ ನಾಗರಿಕರು ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸಿದರು.

`ಪೆಟ್ರೊಲ್ ಬೆಲೆ ಹೆಚ್ಚು, ಕಿರಾಣಿ ವಸ್ತುಗಳ ಬೆಲೆ ಹೆಚ್ಚು, ತರಕಾರಿಗಳ ಬೆಲೆಯೂ ಹೆಚ್ಚಾದರೆ ಇನ್ನು ಹೊಟ್ಟೆಗೆ ತಣ್ಣೀರೇ ಗತಿ~ ಎಂದು ಪಟ್ಟಣದ ಬಡ ಹಾಗೂ ಮಧ್ಯಮ ವರ್ಗದ ಜನತೆ ನಿಟ್ಟುಸಿರು ಬಿಡುತ್ತಿದ್ದಾರೆ.

`ಮಳೀನ ಆಗಿಲ್ರಿ, ನಾವು ತೊಗೊಂಡ ರೇಟ್ ಜಾಸ್ತಿ ಐತ್ರಿ, ನಾವರ ಕಡಿಮಿ ರೇಟಿಗೆ ಹೆಂಗ ಕೊಡಾಕ ಬರ್ತೈತ್ರಿ, ಇದರಾಗ ನಮಗೆ ಉಳಿಯೋ ಲಾಭಾನೂ ಅಷ್ಟಕ್ಕಷ್ಟ~ ಎನ್ನುತ್ತಾರೆ ತರಕಾರಿ ಮಾರಾಟಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.