ಜಗಳೂರು: ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ₨ 4 ಕೋಟಿ ವೆಚ್ಚದಲ್ಲಿ ಪಟ್ಟಣದ ವಿವಿಧೆಡೆ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಅಧಿಕಾರಿಗಳ ಗೈರು ಹಾಜರಿಯಲ್ಲಿ ಬೇಕಾಬಿಟ್ಟಿ ಕೈಗೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದ ಮಧ್ಯ ಹಾದುಹೋಗುವ ದಾವಣಗೆರೆ–ಚಳ್ಳಕೆರೆ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ರೂ 4 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಬೆಂಗಳೂರು ಮೂಲದ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. 15 ದಿನಗಳಿಂದ ದಾವಣಗೆರೆ–ಚಳ್ಳಕೆರೆ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಅರ್ಧ ಭಾಗದಲ್ಲಿ ಮೆಟ್ಲಿಂಗ್ ಮಾಡಿ, ಉಳಿದ ಭಾಗ ಕೇವಲ ಡಾಂಬರೀಕರಣ ಮಾಡಲಾಗಿದೆ. ಪಶು ಸಂಗೋಪನಾ ಇಲಾಖಾ ಕಚೇರಿಯಿಂದ ಭಾರತ್ ಟಾಕೀಸ್ವರೆಗೆ ಮೆಟ್ಲಿಂಗ್ ಕೈಗೊಳ್ಳದೆ ಹಳೆಯ ಡಾಂಬರ್ ರಸ್ತೆಯ ಮೇಲೆ ಪುನಃ ಡಾಂಬರೀಕರಣ ಮಾಡಲಾಗಿದೆ.

ಕಾಮಗಾರಿ ನಡೆಯುವ ಸ್ಥಳದಲ್ಲಿ ಪಟ್ಟಣ ಪಂಚಾಯ್ತಿ ಅಥವಾ ನಗರಾಭಿವೃದ್ಧಿ ಇಲಾಖೆಯ ಯಾವುದೇ ಎಂಜಿನಿಯರ್ ಅಥವಾ ಅಧಿಕಾರಿಗಳು ಹಾಜರಿಲ್ಲ. ಗುತ್ತಿಗೆ ಕಂಪೆನಿಯ ಸಿಬ್ಬಂದಿ ಮಾತ್ರ ಕಾಮಗಾರಿ ಉಸ್ತುವಾರಿ ವಹಿಸಿದ್ದಾರೆ. ಕಾಮಗಾರಿಗೆ ಸಂಬಂಧಿಸಿದಂತೆ ಎಸ್ಟಿಮೇಟ್ ( ಅಂದಾಜುಪಟ್ಟಿ) ಪ್ರತಿ ನೀಡುವಂತೆ ಕರವೇ ಮುಖಂಡ ಡಿ.ಟಿ.ಆದಂ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಪಟ್ಟಣ ಪಂಚಾಯ್ತಿಗೆ ಅರ್ಜಿ ಸಲ್ಲಿಸಿದ್ದರೂ ಪ್ರತಿ ನೀಡಿಲ್ಲ.

‘ಈ ಬಗ್ಗೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವೀರಾಚಾರಿ ಅವರನ್ನು ವಿಚಾರಿಸಿದರೆ ನಮ್ಮ ಕಚೇರಿಯಲ್ಲಿ ಅಂದಾಜುಪಟ್ಟಿ ಇಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿದೆ ಎಂದು ಉತ್ತರಿಸುತ್ತಾರೆ’ ಎಂದು ನಾಗರಿಕರು ಆರೋಪಿಸುತ್ತಾರೆ.

ಈ ಮಧ್ಯೆ ಮೂರನೇ ವ್ಯಕ್ತಿ ತಪಾಸಣಾ ಕಾರ್ಯವನ್ನು ಏಜೆನ್ಸಿ ಬೆಂಗಳೂರಿನ ಮಾನಸ ಕನ್ಸ್ಟ್ರಕ್ಷನ್ ಸಂಸ್ಥೆಗೆ ವಹಿಸಲಾಗಿದ್ದು, ಕಾಮಗಾರಿ ತಪಾಸಣೆಗೆ ಪಟ್ಟಣಕ್ಕೆ ಬಂದಿದ್ದರು. ರೂ 4 ಕೋಟಿ ವೆಚ್ಚದ ವ್ಯಾಪಕ ಕಾಮಗಾರಿ ಆಗಿದ್ದರೂ ಕೆಲವೆಡೆ ಮೆಟ್ಲಿಂಗ್ ಇಲ್ಲದೆ ರಸ್ತೆ ನಿರ್ಮಿಸ ಲಾಗಿದೆ. ಅಂದಾಜುಪಟ್ಟಿಯಲ್ಲಿ ಏನಿದೆ. ತೋರಿಸಿ ಎಂದು ಕೆಲವು ನಾಗರಿಕರು 3ನೇ ತಪಾಸಣಾ ಏಜೆನ್ಸಿಯವರಲ್ಲಿ ವಿಚಾರಿಸಿದರು. ನಮ್ಮಲ್ಲಿಯೂ ಅಂದಾಜುಪಟ್ಟಿ ಲಭ್ಯವಿಲ್ಲ. ಜಿಲ್ಲಾಧಿಕಾರಿ ಕಚೇರಿ ಯಿಂದ ನಮಗೆ ಪಟ್ಟಿ ನೀಡಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

ಅಂದಾಜುಪಟ್ಟಿ ಇಲ್ಲದೆ ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿರುವುದು ಶಂಕೆಗೆ ಕಾರಣವಾಗಿದೆ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಜಯಣ್ಣ, ಕರವೇ ಮುಖಂಡ ಡಿ.ಟಿ.ಆದಂ ಆಕ್ಷೇಪ ವ್ಯಕ್ತಪಡಿಸಿದರು.

‘ಕಾಮಗಾರಿ ಕಳಪೆ ಹಿನ್ನೆಲೆಯಲ್ಲಿ ಪಟ್ಟಣದ ₨ 5 ಲಕ್ಷದ ರಸ್ತೆ ಕಾಮಗಾರಿ ಬಿಲ್ ತಡೆಹಿಡಿಯಲಾಗಿದೆ. ಸ್ಥಳೀಯ ಶಾಸಕರು ಸಹ ಅಂದಾಜುಪಟ್ಟಿ ಕೊಡುವಂತೆ ಸೂಚಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಪಟ್ಟಿಯೊಂದಿಗೆ ಸ್ಥಳಕ್ಕೆ ಬರುವರೆಗೆ ಕಾಮಗಾರಿ ನಿಲ್ಲಿಸಲಾಗುವುದು’ ಎಂದು ಮಾನಸ ಸಂಸ್ಥೆಯ ಮುಖ್ಯಸ್ಥ ಭೈರಪ್ಪ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.