ಭಾನುವಾರ, ಜನವರಿ 19, 2020
27 °C

ತಸ್ಲಿಮಾ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ/ಕೋಲ್ಕತ್ತ (ಪಿಟಿಐ): ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿ­ದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ಪ್ರಮುಖ ಮೌಲ್ವಿಯೊಬ್ಬರು ನೀಡಿ­ರುವ ದೂರಿನ ಅನ್ವಯ ಬಾಂಗ್ಲಾ­ದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರಿನ್‌ ಅವರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.ಪೊಲೀಸರ ಈ ಕ್ರಮಕ್ಕೆ ತಸ್ಲಿಮಾ ನಸ್ರಿನ್‌ ಅವರು ಆಘಾತ ವ್ಯಕ್ತ­ಪಡಿಸಿದ್ದಾರೆ.

ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು  ಉತ್ತರ ಪ್ರದೇಶದ ವಿವಾದಾತ್ಮಕ ಮೌಲ್ವಿ ಮೌಲಾನ ತೌಕೀರ್‌ ರಜಾ ಖಾನ್‌ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದನ್ನು ತಸ್ಲಿಮಾ ಅವರು ನ. 6­ರಂದು ಟ್ವಿಟ್ಟರ್‌ನಲ್ಲಿ ಟೀಕಿಸಿದ್ದರು.ಲೇಖಕಿ ಮಾಡಿರುವ ಕೆಲವು ಟ್ವೀಟ್‌­ಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ  ದರ್ಗಾ­–ಇ­–ಅಲಾ ಹಜರತ್‌ನ ಮುಖ್ಯಸ್ಥ  ಮೌಲಾನ ಸುಭನ್‌ ರಜಾ ಖಾನ್‌ ಸುಭನಿ ಮಿಯಾನಿ ಅವರ ಪುತ್ರ ಹಸನ್‌ ರಜಾ ಖಾನ್‌ ನೂರಿ ಅವರು ಬುಧ­ವಾರ ರಾತ್ರಿ ಉತ್ತರ ಪ್ರದೇಶದ ಕೊತ್ವಾಲಿ ಠಾಣೆಯಲ್ಲಿ ದೂರು ದಾಖ­ಲಿ­ಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮೌಲ್ವಿಗಳ ಕುರಿತಾಗಿ ತಸ್ಲಿಮಾ ಅವರು ಟ್ವಿಟ್ಟರ್‌ನಲ್ಲಿ ಮಾಡಿರುವ ಟ್ವೀಟ್‌ಗಳು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.‘ಸತ್ಯ ಮಾತಾಡಿದ್ದೇನೆ’

‘ಆ ಟ್ವೀಟ್‌ಗಳಲ್ಲಿ ಏನು ತಪ್ಪು ಮಾಡಿ­-ದ್ದೇನೆ ಎನ್ನುವುದು ನನಗೆ ತಿಳಿ­ದಿಲ್ಲ. ನಾನು ಸತ್ಯವನ್ನಷ್ಟೇ ಹೇಳಿದ್ದೇನೆ ’ ಎಂದು ತಸ್ಲಿಮಾ ತಿಳಿಸಿದ್ದಾರೆ.

‘ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿರುವ ಭಾರತದಂತಹ ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಇಂತಹ ಬೆಳವಣಿಗೆಗಳು ಹೇಗೆ ನಡೆಯಲು ಸಾಧ್ಯ. ಎಫ್‌ಐಆರ್‌ ದಾಖಲಾಗಿರುವು­ದನ್ನು ಕೇಳಿ ನನಗೆ ಆಘಾತ­ವಾಯಿತು’ ಎಂದು ತಸ್ಲಿಮಾ ಹೇಳಿದ್ದಾರೆ.ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ ಹೊತ್ತಿರುವ ತಸ್ಲಿಮಾ ನಸ್ರಿನ್‌, ಮೂಲಭೂತವಾದಿ­ಗಳ ಬೆದರಿಕೆ ಹಿನ್ನೆಲೆಯಲ್ಲಿ ಬಾಂಗ್ಲಾ­ದೇಶ­ದಿಂದ ಬಲವಂತವಾಗಿ ಭಾರತಕ್ಕೆ ಪಲಾಯನ ಮಾಡಿದ್ದರು

ಪ್ರತಿಕ್ರಿಯಿಸಿ (+)