ಭಾನುವಾರ, ಜೂನ್ 13, 2021
24 °C

ತಹಶೀಲ್ದಾರ್ ರಜೆ: ಅಭಿವೃದ್ಧಿ ಕಾಮಗಾರಿಗಳಿಗೆ ಬ್ರೇಕ್

ಪ್ರಜಾವಾಣಿ ವಿಶೇಷ ವರದಿ/ ಮಾಡಾಳು ಶಿವಲಿಂಗಪ್ಪ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಬರಪೀಡಿತ ಅರಸೀಕೆರೆ ತಾಲ್ಲೂಕಿನಲ್ಲಿ ಬೇಸಿಗೆಯ ಝಳ ದಿನೇದಿನೇ ತೀವ್ರವಾಗುತ್ತಿದೆ. ಇತ್ತ ಜನರು ತತ್ತರಿಸುತ್ತಿದ್ದರೆ ಬಾರಿ ಬಾರಿ ತಹಶೀಲ್ದಾರರೂ ಬದಲಾಗುತ್ತಿರುವುದರಿಂದ ಬರ ಕಾಮಗಾರಿಯೂ ನಿಧಾನಗತಿಯಲ್ಲಿ ನಡೆಯುವಂತಾಗಿದೆ.ತಾಲ್ಲೂಕು ಬರಪೀಡಿತ ಎಂದು ಘೋಷಣೆಯಾಗಿ ಹಲವು ತಿಂಗಳು ಕಳೆದಿವೆ. ಈಗಾಗಲೇ ತಾಲ್ಲೂಕಿನಲ್ಲಿ ಬರ ಪರಿಹಾರದ ಕಾಮಗಾರಿಗಳ ತ್ವರಿತವಾಗಿ  ಅನು ಷ್ಠಾನವಾಗಬೇಕಿತ್ತು. ಆದರೆ ಅವೆಲ್ಲವುಗಳಿಗೆ ಇಂದು ರೀತಿಯ ಬ್ರೇಕ್ ಬಿದ್ದಿದೆ. ಕುಡಿಯುವ ನೀರು ಮೇವಿ ಗಾಗಿ ಜನ-ಜಾನುವಾರುಗಳು ಪರಿತಪಿಸುತ್ತಿದ್ದಾರೆ.ಬೇರೆ ಸಂದರ್ಭಗಳಲ್ಲಾದರೆ ಬೇರೆ ವಿಚಾರ. ಬರ ದಂಥ ಸಂದರ್ಭದಲ್ಲಾದರೂ ಒಬ್ಬ ದಕ್ಷ ಅಧಿಕಾರಿ ಕನಿಷ್ಠ ಎರಡು ಮೂರು ವರ್ಷ ಒಂದೆಡೆ ಇರಬೇಕು ಎಂದು ಜನರು ಬಯಸುತ್ತಾರೆ.  ಆದರೆ ಅರಸೀಕೆರೆ ತಾಲ್ಲೂಕು ಕಳೆದ ಎರಡು ವರ್ಷಗಳಲ್ಲಿ ಐವರು ತಹಶೀಲ್ದಾರರನ್ನು ಕಂಡಿದ್ದು ಸದ್ಯ ಆರನೇ ತಹಶೀಲ್ದಾರ್ ಅವರಿಗಾಗಿ ಕಾಯುವ ಸ್ಥಿತಿ ಇದೆ.2008ರ  ಏಪ್ರಿಲ್‌ನಲ್ಲಿ ಟಿ.ಆರ್ ಶೋಭಾ ಅಧಿಕಾ ರವಹಿಸಿ ಕೊಂಡರು. 2009ಜೂನ್‌ನಲ್ಲಿಯೇ ಬೇರೆ ಡೆಗೆ ವರ್ಗಾವಣೆಗೊಂಡರು. ನಂತರ ಬಂದವರು ನೂರುದ್ದೀನ್ ಷರೀಪ್. ಇವರು ತಾಲ್ಲೂಕಿನಲ್ಲಿದ್ದು ಕೇವಲ 8 ದಿನ.

 

ಜಿ.ಪಂ ಮಾಜಿ ಅಧ್ಯಕ್ಷರೊಬ್ಬರ ಮುನಿಸಿಗೆ ಕಾರಣವಾಗಿ ಎಂಟೇ ದಿನದಲ್ಲಿ ಅವರೇ ಖುದ್ದಾಗಿ ಬೇರೆಡೆಗೆ ವರ್ಗಾವಣೆ ಮಾಡಿಸಿ ಕೊಂಡರು. ಬಳಿಕ ಎಚ್.ಎಸ್. ಸತೀಶ್‌ಬಾಬು ಬಂದರು. ಇವರೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸದೆ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡರು.2010 ಏ.19ರಂದು  ತಹಶೀಲ್ದಾರರಾಗಿ ಬಂದ ಎನ್.ಎಸ್. ಚಿದಾನಂದ ತಾಲ್ಲೂಕಿನಲ್ಲಿ ನೆಲೆ ನಿಲ್ಲುವ ಲಕ್ಷಣ ಗೋಚರಿಸಿತ್ತು. ಆದರೆ ಸರ್ಕಾರಿ ಸಮಾ ರಂಭದ ಪೂರ್ವಭಾವಿ ಸಭೆಯಲ್ಲಿ ಶಾಸಕರಿಗೆ ಆಸನ ನೀಡಲಿಲ್ಲ ಎಂಬ ಹಿನ್ನಲೆಯಲ್ಲಿ ಅದೇ ವರ್ಷ ನವೆಂಬರ್‌ನಲ್ಲಿ ಎತ್ತಂಗಡಿಯಾಗಿ ಬೇಲೂರು ತಾಲ್ಲೂ ಕಿಗೆ ಹೋದರು.ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆಯಾಗಿ ಸೇವೆಯಿಂದ ಅಮಾನತುಗೊಂಡದ್ದೂ ಆಯಿತು. ಇವರ ಬಳಿಕ,  ಏಳು ತಿಂಗಳ ಹಿಂದೆ ತಾಲ್ಲೂಕಿಗೆ ಬಂದ ಎಸ್.ಎಂ. ಶಿವಕುಮಾರ್ ಉತ್ಸಾಹ ದಿಂದ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿಯೇ ಹಗರಣವೊಂದಕ್ಕೆ ಸಿಲುಕಿದರು. ವೈಯುಕ್ತಿಕವಾಗಿರುವ ಈ ಪ್ರಕರಣದಿಂದ ಅವಮಾನಿತರಾದ ಶಿವಕುಮಾರ್ ರಜೆ ಹಾಕಿ ತೆರಳಿದ್ದಾರೆ. ತಾಲ್ಲೂಕು ಕಚೇರಿ ಮುಖ್ಯಸ್ಥರು ಪದೇ ಪದೇ ಬದಲಾವಣೆ ಆಗುತ್ತಿರು ವುದರಿಂದ ದೈನಂದಿನ ಕೆಲಸ ಕಾರ್ಯಗ ಳಿಗೂ ಧಕ್ಕೆಯಾಗುತ್ತಿದೆ. ಸಣ್ಣಪುಟ್ಟ ಕೆಲಸಗಳಿಗಾಗಿಯೂ ಜನರು ಪದೇ ಪದೇ ಕಚೇರಿಗೆ ಅಲೆಯ ಬೇಕಾದ ಸ್ಥಿತಿ ಬಂದಿದೆ. ಕಚೇರಿ ಅಂಟಿದ ಈ ರೋಗ ದಿಂದ ಎಂದು ಮುಕ್ತಿ ಕಾಣುವುದೋ? ಎಂದು ಕಾಯುವಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.