ಗುರುವಾರ , ಮೇ 13, 2021
24 °C

ತಾಂತ್ರಿಕದೋಷ ಪಿಜಿಬಿ ವ್ಯವಹಾರ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಆನ್‌ಲೈನ್ ವ್ಯವಸ್ಥೆ ಅಳವಡಿಸಿಕೊಂಡು ವರ್ಷಕಳೆದರೂ ತಾಂತ್ರಿಕ ತೊಂದರೆಯ ಕಾರಣಗಳನ್ನು ಮುಂದೆಮಾಡಿ ಇಲ್ಲಿಯ ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಪದೇ ಪದೇ ವ್ಯವಹಾರ ಸ್ಥಗಿತಗೊಳಿಸುತ್ತಿರುವುದರಿಂದ ಗ್ರಾಹಕರು, ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಖಾತೆಗಳನ್ನು ಹೊಂದಿರುವ ರೈತರು ಪರದಾಡುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.ಶುಕ್ರವಾರ ವ್ಯಹಾರದ ಸಮಯ ಆರಂಭಗೊಳ್ಳುತ್ತಿದ್ದಂತೆ ಬ್ಯಾಂಕ್‌ನ ಗೇಟ್ ಮುಚ್ಚಿ ಅದಕ್ಕೆ `ತಾಂತ್ರಿಕ ದೋಷದಿಂದಾಗಿ ವ್ಯವಹಾರ ಸ್ಥಗಿತಗೊಳಿಸಲಾಗಿದೆ~ ಎಂಬ ಫಲಕವನ್ನು ನೇತುಹಾಕಿದ್ದರಿಂದ ವ್ಯವಹರಿಸಲು ಬಂದ ಗ್ರಾಹಕರು ಹಾಗೇ ಮರಳಿ ಹೋಗುತ್ತಿದ್ದುದು ಕಂಡುಬಂದಿತು.ಸಿಬ್ಬಂದಿಯ ಸಹಕಾರದಿಂದಾಗಿ ಸದರಿ ಬ್ಯಾಂಕ್‌ಶಾಖೆಯಲ್ಲಿ ಹಳ್ಳಿಗಾಡಿನ ಮತ್ತು ಅನಕ್ಷರಸ್ಥರು, ಸಾಮಾನ್ಯ ಗ್ರಾಹಕರು ಹೆಚ್ಚಾಗಿ ಇಲ್ಲಿ ಖಾತೆಗಳನ್ನು ತೆರೆದಿದ್ದು, ಮೊದಲು ಇಂಥ ಸಮಸ್ಯೆ ಇರಲಿಲ್ಲ.ಆನ್‌ಲೈನ್ ವ್ಯವಸ್ಥೆ ಅಳವಡಿಸಿಕೊಂಡ ನಂತರ ಹೆಚ್ಚಾಗಿದ್ದು ಯಾವುದೇ ವ್ಯವಹಾರ ನಡೆಯುವ ಖಾತರಿ ಇಲ್ಲದಂತಾಗಿದೆ ಎಂದು ಕೆಲ ಗ್ರಾಹಕರು ಅಳಲು ತೋಡಿಕೊಂಡರು.

ಆನ್‌ಲೈನ್ ವ್ಯವಸ್ಥೆಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಲಾಗಿದೆ. ಇತರೆ ಬ್ಯಾಂಕ್‌ಗಳಲ್ಲಿ ಇಲ್ಲದ ತಾಂತ್ರಿಕ ಸಮಸ್ಯೆ ಈ ಶಾಖೆಯಲ್ಲಿ. ಈ ವಿಷಯವನ್ನು ಬಿಎಸ್‌ಎನ್‌ಎಲ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಬ್ಯಾಂಕ್‌ನ ಮೂಲಗಳು ತಿಳಿಸಿವೆ.

ಆಗಾಗ್ಗೆ ರಜೆ ದಿನಗಳು ಬಂದಾಗ ಗ್ರಾಹಕರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಅಲ್ಲದೇ ಏ.14 ಸಾರ್ವತ್ರಿಕ ರಜೆ ಭಾನುವಾರ ವಾರದ ರಜೆ ಹಾಗಾಗಿ ಸೋಮವಾರದವರೆಗೂ ಕಾಯಬೇಕು. ಅಂದು ಸಹ ತಾಂತ್ರಿಕ ದೋಷ ಉಂಟಾದರೆ ನಮ್ಮ ಗತಿ ಏನು ಎಂಬುದು ಗ್ರಾಹಕರ ಪ್ರಶ್ನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.