ಬುಧವಾರ, ಜನವರಿ 29, 2020
28 °C

ತಿರುಗೇಟು ನೀಡಲು ಕಾದಿದೆ ಬಿಎಫ್‌ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುಗೇಟು ನೀಡಲು ಕಾದಿದೆ ಬಿಎಫ್‌ಸಿ

ಬೆಂಗಳೂರು: ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತನ್ನ ಮೊದಲ ಐ ಲೀಗ್‌ ಟೂರ್ನಿಯಲ್ಲಿ ಭರವಸೆಯ ಹೆಜ್ಜೆಗಳನ್ನು ಇಟ್ಟಿದೆ. ಅನುಭವಿ ತಂಡಗಳನ್ನು ಹಿಂದಿಕ್ಕಿ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಗಟ್ಟಿಯಾಗಿರುವ ಆತಿಥೇಯರು ಭಾನು ವಾರ ನಡೆಯಲಿರುವ ಈಸ್ಟ್‌್ ಬೆಂಗಾಲ್‌ ಎದುರಿನ ಪಂದ್ಯದಲ್ಲಿ ತಿರುಗೇಟು ನೀಡಲು ಕಾತರದಿಂದ ಕಾಯುತ್ತಿದ್ದಾರೆ.13 ಪಂದ್ಯಗಳನ್ನು ಆಡಿರುವ ಬಿಎಫ್‌ಸಿ ಎಂಟು ಪಂದ್ಯಗಳಲ್ಲಿ ಗೆಲುವು ಮತ್ತು ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.  ಅಕ್ಟೋಬರ್‌ 26ರಂದು ಕೋಲ್ಕತ್ತದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ ತಂಡ ಈಸ್ಟ್‌ ಬೆಂಗಾಲ್‌ ಎದುರು ಸೋಲು ಕಂಡಿತ್ತು. ಆ ನಿರಾಸೆಗೆ ತಿರುಗೇಟು ನೀಡಲು ಆ್ಯಷ್ಲೆ ವೆಸ್ಟ್‌ವುಡ್‌ ಗರಡಿಯಲ್ಲಿ ತರಬೇತುಗೊಂಡಿರುವ ಆತಿಥೇಯರು ಸಜ್ಜಾಗಿದ್ದಾರೆ.ಅಶೋಕ ನಗರದಲ್ಲಿರುವ ರಾಜ್ಯ ಫುಟ್‌ಬಾಲ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸುನಿಲ್‌ ಚೆಟ್ರಿ ಸಾರಥ್ಯದ ಬಿಎಫ್‌ಸಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಹಿಂದಿನ ನಾಲ್ಕೂ ಪಂದ್ಯಗಳಲ್ಲಿ ಕ್ರಮ ವಾಗಿ ಮಹಮ್ಮಡನ್‌, ಚರ್ಚಿಲ್‌ ಬ್ರದರ್ಸ್‌, ಶಿಲ್ಲಾಂಗ್‌ ಲಾಜಿಂಗ್‌ ಮತ್ತು ಸಲಗಾಂವ್ಕರ್‌ ಎದುರು ಗೆಲುವು ಸಾಧಿಸಿರುವ ಆತಿಥೇಯರು ವಿಶ್ವಾಸ ದಿಂದ ಬೀಗುತ್ತಿದ್ದಾರೆ.ಭಾನುವಾರದ ಪಂದ್ಯ ಸೇರಿದಂತೆ ಬಿಎಫ್‌ಸಿ ಇನ್ನು ಐದು ಪಂದ್ಯಗಳನ್ನು ಆಡಬೇಕಿದೆ. ಉಳಿದ ಪಂದ್ಯಗಳಲ್ಲಿಯೂ ದಿಟ್ಟ ಪ್ರದರ್ಶನ ತೋರಿ ಅಗ್ರಸ್ಥಾನ ಕಾಪಾಡಿಕೊಳ್ಳುವ ಲೆಕ್ಕಾಚಾರ ಚೆಟ್ರಿ ಬಳಗದ್ದಾಗಿದೆ. ಗುರುವಾರ ಮಾಧ್ಯಮ ದವರ ಜೊತೆ ಮಾತನಾಡಿದ ವೆಸ್ಟ್‌ ವುಡ್‌ ಇದೇ ಮಾತನ್ನು ಹೇಳಿದರು.‘ಹಿಂದಿನ ಪಂದ್ಯಗಳಲ್ಲಿ ಉತ್ತಮ ಹೋರಾಟ ತೋರಿದ್ದೇವೆ. ಮುಂದೆಯೂ  ಅದೇ ರೀತಿ ಆಟವಾಡುವ ವಿಶ್ವಾಸವಿದೆ’ ಎಂದು ಅವರು ನುಡಿದರು. ಆದರೆ, ನಾಲ್ಕು ಸಲ ‘ಹಳದಿ ಕಾರ್ಡ್‌್’ ಪಡೆದಿರುವ ಜಾನ್‌ ಜಾನ್ಸನ್‌ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.ಗೆಲುವಿನ ಹಾದಿಯತ್ತ: ಹಿಂದಿನ ಪಂದ್ಯದಲ್ಲಿ ಸಲಗಾಂವ್ಕರ್‌ ಎದುರು ಡ್ರಾ ಸಾಧಿಸಿದ್ದ ಈಸ್ಟ್‌್ ಬೆಂಗಾಲ್‌ ಗೆಲುವಿನ ಸವಿ ಕಾಣುಬೇಕೆನ್ನುವ ಆಶಯ ಹೊಂದಿದೆ. ಅದಕ್ಕೂ ಮುಂಚಿನ ಪಂದ್ಯಗಳಲ್ಲಿ ಈ ತಂಡ ರಂಗದೇಜಿದ್‌ ಯುನೈಟೆಡ್‌ ಮತ್ತು ಮುಂಬೈ ಕ್ಲಬ್‌ ಎದುರು ನಿರಾಸೆ ಅನುಭವಿಸಿತ್ತು.ಈಸ್ಟ್‌ ಬೆಂಗಾಲ್‌ ಕ್ಲಬ್‌ ಹತ್ತು ಪಂದ್ಯಗಳನ್ನಾಡಿ ನಾಲ್ಕು ಗೆಲುವು ಮತ್ತು ಮೂರು ಸೋಲುಗಳನ್ನು ಕಂಡಿದೆ. 15 ಪಾಯಿಂಟ್‌ ಗಳಿಸಿರುವ ತಂಡ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.ಪಂದ್ಯ ಆರಂಭ: ಮಧ್ಯಾಹ್ನ 3 ಗಂಟೆ.

 

ಪ್ರತಿಕ್ರಿಯಿಸಿ (+)