ಬುಧವಾರ, ಜನವರಿ 29, 2020
29 °C

ತಿರುವಾಂಕೂರು ರಾಜವಂಶಸ್ಥ ಮಾರ್ತಾಂಡ ವರ್ಮ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಪಿಟಿಐ): ತಿರು­ವಾಂ­ಕೂರು ರಾಜವಂಶಸ್ಥ ಉತ್ರಾಡಂ ತಿರುನಾಳ್‌ ಮಾರ್ತಾಂಡ­ವರ್ಮ ಸೋಮವಾರ ಬೆಳಿಗ್ಗೆ ಹೃದಯಾಘಾತ­ದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.91 ವರ್ಷದ ವರ್ಮ ಸುಪ್ರಸಿದ್ಧ ಪದ್ಮನಾಭಸ್ವಾಮಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು. ಜೀರ್ಣಾಂಗನಾಳದ ರಕ್ತಸ್ರಾವದ ಕಾರಣ ಕಳೆದ ವಾರ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಕುಂಟುಂಬ ಮೂಲಗಳು ತಿಳಿಸಿವೆ.ಇವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಇವರ ಪತ್ನಿ ಈ ಮೊದಲೇ ಮರಣ ಹೊಂದಿದ್ದಾರೆ.ತಿರುವಾಂಕೂರು ಸಂಸ್ಥಾನದ ಕಡೆಯ ರಾಜರಾಗಿದ್ದ ಇವರ ಹಿರಿಯ ಸಹೋದರ ಚಿತಿರಾ ತಿರುನಾಳ್‌ ಬಲ­ರಾಮ ವರ್ಮಾ 1991ರಲ್ಲಿ ನಿಧನ­ರಾದ ನಂತರ ಮಾರ್ತಾಂಡ ವರ್ಮ ರಾಜಮನೆತನದ ಮುಖ್ಯಸ್ಥರಾ­ಗಿದ್ದರು.2011ರಲ್ಲಿ ಪದ್ಮನಾಭಸ್ವಾಮಿ ದೇವಾಲ­ಯದ ನೆಲಮಾಳಿಗೆಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನಾ­ಭರಣಗಳು ಪತ್ತೆಯಾದಾಗ ದೇವಸ್ಥಾನ ಮತ್ತು ರಾಜಮನೆತನ ಎರಡೂ ಪ್ರಸಿದ್ಧಿಗೆ ಬಂದಿದ್ದವು.

ಪ್ರತಿಕ್ರಿಯಿಸಿ (+)