ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಮುಕುಲ್ ಮದ್ಗಲ್ ಅವರ ನೇತೃತ್ವದ ಸಮಿತಿ ರಚಿಸಿರುವ ಕ್ರೀಡಾಭಿವೃದ್ಧಿ ಮಸೂದೆಯ ಕರಡುನಲ್ಲಿ, ಕ್ರೀಡಾ ಮೇಲ್ಮನವಿ ನ್ಯಾಯಮಂಡಳಿ, ಕ್ರೀಡಾ ಚುನಾವಣಾ ಆಯೋಗ, ಅಥ್ಲೀಟ್ಸ್ ಆಯೋಗ ಇತ್ಯಾದಿ ಕುರಿತು ಶಿಫಾರಸು ಮಾಡಲಾಗಿದೆ. ಈ ಘಟಕಗಳನ್ನು ಬಲಗೊಳಿಸುವುದಕ್ಕೆ ಪೂರಕವಾದ ಬಹಳಷ್ಟು ಅಂಶಗಳನ್ನೂ ಸೇರಿಸಲಾಗಿದೆ.

ಕ್ರೀಡಾ ನ್ಯಾಯಮಂಡಳಿಯ ತೀರ್ಪನ್ನು ಸಂಬಂಧಪಟ್ಟ ವ್ಯಕ್ತಿ ಅಥವಾ ಸಂಸ್ಥೆ ಒಪ್ಪಿಕೊಳ್ಳದಿದ್ದರೆ ಅಂತಹವರ ಮೇಲೆ ಮಂಡಳಿಯು ದಂಡ ವಿಧಿಸಬಹುದು. ಇಂತಹ ಮೊದಲ ಪ್ರಕರಣಕ್ಕೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಬಹುದಾದರೆ, ನಂತರದ ಪ್ರಕರಣಗಳಲ್ಲಿ ಇದು ಎರಡು ಲಕ್ಷ ರೂಪಾಯಿ ಆಗುತ್ತದೆ. ಆದರೆ ಸಂಬಂಧಪಟ್ಟವರಿಂದ ತೀವ್ರ ನಿರ್ಲಕ್ಷ್ಯ ಕಂಡು ಬಂದರೆ ದಂಡದ ಪ್ರಮಾಣ ದಿನಕ್ಕೆ 20 ಸಾವಿರ ರೂಪಾಯಿಗೂ ಏರಿಸಬೇಕು.

ಯಾವುದೇ ಕ್ರೀಡೆಯ ಫೆಡರೇಷನ್ನ ಪದಾಧಿಕಾರಿ, ಸಮಿತಿಯ ಸದಸ್ಯ, ತಂಡದ ಮ್ಯಾನೇಜರ್ ಅಥವಾ ಕೋಚ್ ಇಲ್ಲವೇ ಅಥ್ಲೀಟ್ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಅಂತಹವರ ಮೇಲೆ ಕಠಿಣ ಕ್ರಮದ ಬಗ್ಗೆ ಈ ಕರಡುವಿನಲ್ಲಿ ವಿವರಿಸಲಾಗಿದೆ.

ಅಂತಹ ಅಪರಾಧಿಗಳು ಯಾವುದೇ ಕ್ರೀಡಾಕೂಟದಲ್ಲಿ, ಯಾವುದೇ ರೂಪದಲ್ಲಿ ಪಾಲ್ಗೊಳ್ಳದಂತೆ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಸಂಬಂಧಪಟ್ಟ ಕ್ರೀಡಾ ಫೆಡರೇಷನ್ ನಿಷೇಧ ಹೇರಬೇಕು.

ಈ ಕ್ರೀಡಾ ಕಾಯ್ದೆಗೆ ಕಾಲಾನುಕ್ರಮದಲ್ಲಿ ಅಗತ್ಯವಾದ ತಿದ್ದುಪಡಿ ಮಾಡಬಹುದು. ರಾಷ್ಟ್ರೀಯ ಒಲಿಂಪಿಕ್ ಸಮಿತಿ, ಸಂಬಂಧಪಟ್ಟ ಕ್ರೀಡೆಯ ರಾಷ್ಟ್ರೀಯ ಫೆಡರೇಷನ್ಗಳ ಜತೆ ಚರ್ಚಿಸಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳಬಹುದು.

ಆದರೆ ಕಾಯ್ದೆಗೆ ಸಂಬಂಧಿಸಿದಂತೆ ನಡೆಯುವ ಇಂತಹ ತಿದ್ದುಪಡಿಯ ನಿರ್ಧಾರವನ್ನು ಸಂಸತ್ತಿನ ಉಭಯ ಸದನಗಳಲ್ಲಿಯೂ ಮಂಡಿಸಬೇಕು. ಅಲ್ಲಿ ಒಪ್ಪಿಗೆ ಪಡೆಯಬೇಕು.

ಹೀಗೆ, ಕ್ರೀಡಾಭಿವೃದ್ಧಿ ಮಸೂದೆಯ ಕರಡು ಕ್ರೀಡೆಗೆ ಸಂಬಂಧಿಸಿದಂತೆ ಚಾರಿತ್ರಿಕ ಶಿಫಾರಸುಗಳನ್ನು ಹೊಂದಿದೆ. ಈ ಕರಡನ್ನು ರಚಿಸುವ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ಕ್ರೀಡಾ ನೀತಿಯ ಬೆಳವಣಿಗೆಗಳನ್ನೂ ಗಮನಕ್ಕೆ ತೆಗೆದುಕೊಳ್ಳಲಾಗಿದೆ. 2003ರ ನವೆಂಬರ್ನಲ್ಲಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಎಲ್ಲಾ ದೇಶಗಳೂ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂಬ ನಿರ್ಣಯ ತೆಗೆದು ಕೊಳ್ಳಲಾಗಿತ್ತು. ಶಿಕ್ಷಣ, ಆರೋಗ್ಯ, ಅಭಿವೃದ್ಧಿ, ಶಾಂತಿಯ ದಿಕ್ಕಿನಲ್ಲಿ ಕ್ರೀಡೆಯು ಮುಖ್ಯವಾಹಕ ಎಂದೂ ಆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಲಾಗಿತ್ತು. ಅಂತಹ ಹಲವು ಸಂದರ್ಭಗಳಲ್ಲಿ ತೆಗೆದುಕೊಳ್ಳಲಾದ ತೀರ್ಮಾನಗಳನ್ನೆಲ್ಲಾ ಈ ಕರಡು ರಚನೆಯ ಸಂದರ್ಭದಲ್ಲಿ ಅಭ್ಯಸಿಸಿ ಅದರ ಉತ್ತಮ ಅಂಶಗಳನ್ನು ಆಯ್ದುಕೊಳ್ಳಲಾಗಿದೆ.

ಹೀಗಾಗಿ, ಕ್ರೀಡಾ ಆಡಳಿತ ಮತ್ತು ನಿರ್ವಹಣೆ ವಿಷಯದಲ್ಲಿ ಕ್ರೀಡಾಪಟುಗಳಿಗೇ ಹೆಚ್ಚಿನ ಅವಕಾಶ ಇರುವಂತೆ ಈ ಕರಡುನಲ್ಲಿ ಶಿಫಾರಸುಗಳನ್ನು ಮಾಡಲಾಗಿದೆ. ಕ್ರೀಡಾಪಟುಗಳ ಶಿಕ್ಷಣ, ಆರೋಗ್ಯ ಮತ್ತು ಪಿಂಚಣಿ ಬಗ್ಗೆಯೂ ಚರ್ಚಿಸಲು ಸಾಧ್ಯವಾಗಿದೆ.
(ಮುಗಿಯಿತು)

ಕ್ರೀಡಾಭಿವೃದ್ಧಿಯಲ್ಲಿ ಹೊಸ ಶಕೆ ಸಾಧ್ಯತೆ
ರಾಷ್ಟ್ರೀಯ ಕ್ರೀಡಾಭಿವೃದ್ಧಿ ಮಸೂದೆ- 2013ರ ಕರಡನ್ನು ನಾನು ಸಂಪೂರ್ಣವಾಗಿ ಓದಿದ್ದೇನೆ. ಕ್ರೀಡೆಗೆ ಸಂಬಂಧಿಸಿದಂತೆ ಈಚೆಗಿನ ವರ್ಷಗಳಲ್ಲಿ ನಾನು ಕಂಡ ಅತ್ಯುತ್ತಮ ಪ್ರಯತ್ನ ಇದು. ದೇಶದ ಕ್ರೀಡಾ ಚಟುವಟಿಕೆಗಳ ಸೂಕ್ಷ್ಮಗಳನ್ನೆಲ್ಲಾ ಪರಾಮರ್ಶಿಸಿ, ವಿದೇಶದ ನಿದರ್ಶನಗಳನ್ನು ಅಧ್ಯಯನ ನಡೆಸಿ, ಮುಂದಾಲೋಚನೆಯಿಂದ ರೂಪಿಸಿದ ಕರಡು ಇದು.

ಸಾಮಾನ್ಯವಾಗಿ ನಾನು ಕಂಡಂತೆ ಕ್ರೀಡಾಡಳಿತದ ಕೀಲಿಕೈ ಹಿಡಿದಿರುವ ರಾಜಕಾರಣಿಗಳು, ಸರ್ಕಾರದ ಹಿರಿಯ ಅಧಿಕಾರಿಗಳು, ಉದ್ಯಮಿಗಳು ತಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ನಡೆಸುತ್ತಾ ಬರುತ್ತಿದ್ದಾರೆ. ಆದರೆ ಈ ಕರಡು ಕ್ರೀಡಾಡಳಿತದಲ್ಲಿ ಕ್ರೀಡಾಪಟುಗಳಿಗೂ ಮನ್ನಣೆ ನೀಡಿದೆ. ಈ ಮಸೂದೆ ಜಾರಿಗೊಂಡರೆ ಮಾಜಿ ಮತ್ತು ಹಾಲಿ ಕ್ರೀಡಾಪಟುಗಳು ಕ್ರೀಡಾಡಳಿತದ ಎಲ್ಲಾ ಸ್ತರಗಳಲ್ಲಿಯೂ ಇರಲು ಸಾಧ್ಯವಿದೆ.

ಕ್ರೀಡಾಪಟುಗಳ ನೋವು ನಲಿವುಗಳಿಗೆ ಸ್ಪಂದನ ಸಿಗಲಿದೆ. ಹೀಗಾಗಿ ಈ ಮಸೂದೆ ಪ್ರಸಕ್ತ ಕ್ರೀಡಾಡಳಿತದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧವೇ ಇರುವುದರಿಂದ, ಇದರ ಜಾರಿ ಅಷ್ಟು ಸುಲಭವಾಗಲಿಕ್ಕಿಲ್ಲ. ಅದೇನೇ ಇದ್ದರೂ, ಈ ಮಸೂದೆಗೆ ಒಪ್ಪಿಗೆ ಸಿಕ್ಕಿದರೆ ಈ ದೇಶದ ಕ್ರೀಡಾಭಿವೃದ್ಧಿಯ ದಿಸೆಯಲ್ಲಿ ಹೊಸ ಶಕೆ ಆರಂಭವಾಗಲಿದೆ.
-ರೀತ್ ಅಬ್ರಹಾಂ, ಮಾಜಿ ಅಂತರರಾಷ್ಟ್ರೀಯ ಅಥ್ಲೀಟ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.