ಮಂಗಳವಾರ, ಮೇ 11, 2021
26 °C

ತೂಗುಯ್ಯಾಲೆಯಲ್ಲಿ ಬ್ರಹ್ಮಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಜನಾರ್ದನ ರೆಡ್ಡಿ ಅವರ ಉದ್ದೇಶಿತ ಬ್ರಹ್ಮಣಿ ಉಕ್ಕು ಕಂಪೆನಿ ಸಂಬಂಧ ಇದೀಗ ಆಂಧ್ರ ಸರ್ಕಾರ ಕಾನೂನು ಇಲಾಖೆಯ ಅಭಿಪ್ರಾಯ ಕೇಳಿದೆ. ವೈ.ಎಸ್.ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಬ್ರಹ್ಮಣಿ ಉಕ್ಕು ಕಾರ್ಖಾನೆ ಹಾಗೂ ಕಡಪ ಜಿಲ್ಲೆಯಲ್ಲಿ ಖಾಸಗಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಒಟ್ಟು 10,760 ಎಕರೆ ಕಂದಾಯ ಜಮೀನು ಮಂಜೂರು ಮಾಡಿದ್ದರು.ಆದರೆ ಈ ಕಾಮಗಾರಿಗಳನ್ನು ಕೈಗೊಳ್ಳದ್ದಕ್ಕೆ ಕಾರಣ ವಿವರಿಸಲು ಸೂಚಿಸಿ, ಆಂಧ್ರ ಸರ್ಕಾರ ಕೆಲವು ತಿಂಗಳ ಹಿಂದೆ ಬ್ರಹ್ಮಣಿ ಕಂಪೆನಿಗೆ ಷೋಕಾಸ್ ನೋಟಿಸ್ ನೀಡಿತ್ತು. ಇದೀಗ ಸರ್ಕಾರ ಈ ಯೋಜನೆಗಳನ್ನು ಬೇರೆ ಸಂಸ್ಥೆಗೆ ವಹಿಸುವ ಸಾಧ್ಯತೆ ಕುರಿತು ಚಿಂತಿಸುತ್ತಿದೆ. ಅದಕ್ಕೆ ಮುನ್ನ ಕಾನೂನು ಅಭಿಪ್ರಾಯ ಎದುರು ನೋಡುತ್ತಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.