ತಿಪಟೂರು: ನಗರಸಭೆಗೆ ಸಂದಾಯವಾಗಬೇಕಿದ್ದ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಹೊರಸೇವೆ ಸಲಹೆಗಾರರು ತೆರಿಗೆದಾರರ ಬಾಬ್ತಿಗೆ ಜಮಾ ಮಾಡದೆ ಸುಳ್ಳು ಸಂದಾಯ ಚಲನ್ ತೋರಿಸಿ ಕೋಟ್ಯಂತರ ರೂಪಾಯಿ ವಂಚಿಸಿರುವ ವಿಷಯ ತಿಳಿದು ನಗರದ ನಾಗರಿಕರು ದಿಗಿಲುಗೊಂಡಿದ್ದಾರೆ.

ತೆರಿಗೆದಾರರು ತಾವು ಬ್ಯಾಂಕ್ಗೆ ಕಟ್ಟಲು ಕೊಟ್ಟ ತೆರಿಗೆ ಹಣ ಯಾರದ್ದೋ ಪಾಲಾಗಿದೆ ಎಂಬುದನ್ನು ಅರಿತು ಶನಿವಾರ ಬೆಳಗ್ಗೆ ನಗರಸಭೆಗೆ ಬಂದು ವಿಚಾರಿಸುತ್ತಿದ್ದುದು ಕಂಡುಬಂತು. ಹತ್ತಿಪ್ಪತ್ತು ಸಾವಿರದಿಂದ ಲಕ್ಷ ರೂಪಾಯಿಗೂ ಹೆಚ್ಚು ಹಣ ಕೊಟ್ಟಿದ್ದವರು ತಮ್ಮ ಬಾಬ್ತು ಅಷ್ಟು ದೊಡ್ಡ ಮೊತ್ತ ಸಂದಾಯವಾಗಿಲ್ಲ ಎಂದು ಅರಿತು ಗಾಬರಿಯಾಗಿದ್ದರು. ನಗರಸಭೆಗೆ ಬಂದ ತೆರಿಗೆದಾರರು ಅಲ್ಲಿ ವಿಚಾರಿಸಿ ನಂತರ ತಮ್ಮ ಚಲನ್ ಹಿಡಿದು ಬ್ಯಾಂಕ್ನಲ್ಲಿ ಪರಿಶೀಲಿಸಲು ಪರದಾಡುತ್ತಿದ್ದರು.

ಕೆಲವರು ಗಾಂಧಿ ನಗರದ ಚಾಮುಂಡಿ ಬಡಾವಣೆಯಲ್ಲಿರುವ ಸಿಖಂದರ್ ಮನೆಗೂ ಎಡತಾಕಿದ್ದರು. ಅಲ್ಲಿ ಸಿಖಂದರ್ ಇರಲಿಲ್ಲ. ಅವರ ತಾಯಿ ಮನೆಗೆ ಬಂದವರನ್ನು ಸಮಾಧಾನ ಮಾಡಿ, ಮಗ ಮನೆಗೆ ಬರಲಿ ವಿಚಾರಿಸಿ ನಿರ್ಧಾರಕ್ಕೆ ಬರೋಣ ಎಂದು ಹೇಳಿ ಕಳುಹಿಸುತ್ತಿದ್ದರು. ತಮ್ಮ ಮಗ ಒಬ್ಬನೇ ಈ ಅವ್ಯವಹಾರ ಮಾಡಿರಲಿಕ್ಕಿಲ್ಲ. ಎಲ್ಲ ಬಯಲಾಗಲಿ ಎಂದು ನೋವಿನಿಂದ ಹೇಳುತ್ತಿದ್ದರು ಎಂದು ತಿಳಿದು ಬಂದಿದೆ.

ಸದಸ್ಯರಿಗೂ: ನಾಗರಿಕರಿಗಿರಲಿ, ನಗರಸಭೆಯ ಕೆಲ ಸದಸ್ಯರಿಂದಲೂ ಪಡೆದ ತೆರಿಗೆ ಹಣವನ್ನೂ ಸಿಖಂದರ್ ವಂಚಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ತಮ್ಮ ತೆರಿಗೆ ಬಾಬ್ತು ಬ್ಯಾಂಕ್ಗೆ ಕಟ್ಟಲು ಒಬ್ಬ ಸದಸ್ಯರು ಕೊಟ್ಟಿದ್ದ 45 ಸಾವಿರ, ಮತ್ತೊಬ್ಬರು ನೀಡಿದ್ದ 25 ಸಾವಿರ ರೂಪಾಯಿ ಆತನ ಜೇಬು ಸೇರಿರುವುದು ದೃಢಪಟ್ಟಿದೆ. ತಾವೇ ವಂಚನೆಗೆ ಒಳಗಾದೆವಲ್ಲ ಎಂದು ಅವರು ಪರಿತಪಿಸುತ್ತಿದ್ದಾರೆ. ಇನ್ನೂ ಪರಿಶೀಲಿಸಿಕೊಳ್ಳದ ಕೆಲ ಸದಸ್ಯರು ಈ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.

ಆಡಿಟರ್ ದೌಡು: ಸುದ್ದಿ ತಿಳಿದ ನಗರಸಭೆ ಆಡಿಟಿಂಗ್ ನಿರ್ವಹಿಸಿದ್ದ ತುಮಕೂರಿನ ಆಡಿಟರ್ಗಳು ದೌಡಾಯಿಸಿದ್ದರು. ಮತ್ತೆ ಆಡಿಟ್ ಮಾಡಿ ಸರಿ ಪಡಿಸಿಕೊಡುತ್ತೇವೆಂದು ಹೇಳಿದ ಅವರಿಗೆ ಪೌರಾಯುಕ್ತರು ಅವಕಾಶ ನೀಡಲಿಲ್ಲ ಎಂದು ತಿಳಿದುಬಂದಿದೆ.

ಧೂಳು ಕೊಡವುತ್ತಿದ್ದಾರೆ: 2003ರಿಂದ ನಡೆದಿರಬಹುದಾದ ಈ ಹಗರಣದಿಂದ ನಗರಸಭೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂಬುದನ್ನು ಅರಿತು ಮೂಲೆಗೆ ಎಸೆದಿದ್ದ ಚಲನ್ ಕಟ್ಟುಗಳನ್ನು ಈಗ ತೆಗೆದು ಪರಿಶೀಲಿಸುವ ಕೆಲಸ ನಡೆಯುತ್ತಿದೆ. ನಗರಸಭೆ ಕೆಲ ಸಿಬ್ಬಂದಿಯನ್ನು ಇದಕ್ಕೆಂದೇ ಮೀಸಲಿಡಲಾಗಿದೆ. ಈ ಕೆಲಸ ತುಂಬಾ ದಿನ ಹಿಡಿಯಲಿದ್ದು, ಮುಗಿದ ನಂತರ ಸ್ಪಷ್ಟವಾಗಿ ಎಷ್ಟು ಹಣ ವಂಚನೆಯಾಗಿದೆ ಎಂಬುದು ತಿಳಿಯುವ ಸಾಧ್ಯತೆ ಇದೆ.

ಎಸ್ಬಿಎಂನಲ್ಲೂ: ಕೆನರಾಬ್ಯಾಂಕ್ನಲ್ಲಷ್ಟೇ ಅಲ್ಲದೆ ಎಸ್ಬಿಎಂನಲ್ಲಿ ಪಾವತಿ ತೋರಿಸಿ ಚಲನ್ ತಿದ್ದಿ ವಂಚಿಸಿರುವ (ಆನಂದ್ ಕನ್ಫರ್ಟ್ಸ್ ಲೋಕೇಶ್ ಹೆಸರಲ್ಲಿ) 25103 ರೂಪಾಯಿಯ ಒಂದು ಪ್ರಕರಣ ಶನಿವಾರ ದೃಢಪಟ್ಟಿದೆ. ಇದರಲ್ಲಿ ಕೇವಲ 25 ರೂಪಾಯಿ ಮಾತ್ರ ಜಮಾ ಆಗಿದೆ. ಇಂತಹ ಪ್ರಕರಣ ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

ಪ್ರಕರಣ ದಾಖಲು: ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪದ ಮೇಲೆ ಹೊರಸೇವೆ ವ್ಯಕ್ತಿಯಾಗಿದ್ದ ಸಿಖಂದರ್ ವಿರುದ್ಧ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೌರಾಯುಕ್ತರು ನೀಡಿದ್ದ ದೂರಿನ ಮೇರೆಗೆ ಸಿಖಂದರ್ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಐ ಕೊಟ್ರೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.