ಹಾಸನ: ನಗರದ ಹೊರಭಾಗದಲ್ಲಿರುವ ತೇಜೂರು ಕೆರೆಯಲ್ಲಿ ನೀರು ಬತ್ತುತ್ತಿರುವ ದುಃಖ/ಆತಂಕ ಗ್ರಾಮಸ್ಥರಿಗೆ ಇದ್ದರೂ, ಭಾನುವಾರ ಈ ಚಿಂತೆಯನ್ನು ಮರೆತು ಗ್ರಾಮಸ್ಥರು ಸಂಭ್ರಮ ಆಚರಿಸಿಕೊಂಡರು. ಕ್ಲೀನ್ ಇಂಡಿಯಾ ಸಂಸ್ಥೆಯವರು ಈ ಕೆರೆಯಲ್ಲಿ ಹಮ್ಮಿಕೊಂಡಿದ್ದ ಜೀಪ್ ರೇಸ್ ಇದಕ್ಕೆ ಕಾರಣ.

ಭ್ರಷ್ಟಾಚಾರದ ವಿರುದ್ಧ ಕ್ಲೀನ್ ಇಂಡಿಯಾ ಸಂಸ್ಥೆ ಯವರು ಜಾಗೃತಿ ಅಭಿಯಾನ ಆರಂಭಿಸಿದ್ದು, ಹಾಸನ ದಲ್ಲೂ ಸಂಸ್ಥೆಯ ಶಾಖೆ ಆರಂಭಿಸುವ ಯೋಜನೆ ರೂಪಿಸಿದ್ದಾರೆ. ಇದಕ್ಕೆ ಪೂರ್ವಭಾವಿ ಎಂಬಂತೆ ಭಾನುವಾರ ರೇಸ್ ಆಯೋಜಿಸಲಾಗಿತ್ತು.

ತೇಜೂರು ಕೆರೆಯಲ್ಲಿ ಜೆಸಿಬಿ ಬಳಸಿ ಟ್ರ್ಯಾಕ್ಗಳನ್ನು ನಿರ್ಮಿಸಿ, ಅದ ರಲ್ಲಿ ಪಂಪ್ ಸಹಾಯದಿಂದ ನೀರು ಹರಿಸಲಾ ಗಿತ್ತು. ಕೆಸರು ಮಿಶ್ರಿತ ನೀರಿನಲ್ಲಿ ಚಾಲಕರು ಜೀಪ್ ಓಡಿಸಿ ಸ್ಪರ್ಧೆ ಗೆಲ್ಲಬೇಕಾಗಿತ್ತು. ಹಾಸನದಲ್ಲಿ ಮಾತ್ರ ವಲ್ಲ, ದಕ್ಷಿಣಭಾರತದಲ್ಲೇ ಇದೇ ಮೊದಲ ಬಾರಿ ಇಂಥ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಆಯೋಜಕರು ನುಡಿದರು.

ಒಂಬತ್ತು ಬಾರಿ ಐಎನ್ಆರ್ಸಿ ಚಾಂಪಿಯನ್ ಆಗಿದ್ದ ಜಗತ್ ನಂಜಪ್ಪ ರೇಸ್ ಉದ್ಘಾಟಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಾರ್ಟಿನ್ ಹಾಗೂ ತಹಶೀಲ್ದಾರ್ ಕೆ.ಮಥಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕರ್ನಾಟಕ ಮಾತ್ರವಲ್ಲದೆ ಆಂಧ್ರ, ತಮಿಳುನಾಡು, ಹಾಗೂ ಕೇರಳಗಳಿಂದ ಬಂದಿದ್ದ ಐವತ್ತಕ್ಕೂ ಹೆಚ್ಚು ಜೀಪ್ಗಳು ಕೆಸರು ಚಿಮ್ಮಿಸುತ್ತ ಓಡುತ್ತಿದ್ದರೆ ಕೆರೆಯ ಸುತ್ತ ನೆರೆದಿದ್ದ ಸಾವಿರಾರು ಜನರು ಚಾಲಕರನ್ನು ಹುರಿದುಂಬಿಸಿ ಸಂಭ್ರಮಿಸುತ್ತಿದ್ದರು. ಗ್ರಾಮಸ್ಥರು ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ರೇಸ್ನ ಸಂಪೂರ್ಣ ಮನರಂಜನೆಯನ್ನು ಅನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.