ಮಂಗಳವಾರ, ಮೇ 18, 2021
30 °C

ತೇರದಾಳ: ಗುಟ್ಕಾ ಸುಟ್ಟ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೇರದಾಳ: ಗುಟ್ಕಾ ಸುಟ್ಟ ಪೊಲೀಸರು

ಬನಹಟ್ಟಿ: ಬುಧವಾರ ಪಟ್ಟಣದಲ್ಲಿ ಸ್ಥಳೀಯ ಪಿಎಸ್‌ಐ ಸುಂದರೇಶ ಹೊಳೆನ್ನವರ ಅವರು ತಮ್ಮ ಸಿಬ್ಬಂದಿ ಜೊತೆಗೂಡಿ ಪಾನ್‌ಶಾಪ್ ಮತ್ತು ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಿದರು.ಪಟ್ಟಣದ ಪೇಟೆ ಭಾಗ, ಬಸ್ ನಿಲ್ದಾಣ, ಮಹಾವೀರ ವೃತ್ತ ಸೇರಿದಂತೆ ಹಲವಾರು ಕಡೆ ದಾಳಿ ನಡೆಸಿದಾಗ ದೊರೆತ ಸಾವಿರಾರು ರೂಪಾಯಿ ಮೌಲ್ಯದ ಗುಟ್ಕಾ ಚೀಟುಗಳನ್ನು ಬಸ್ ನಿಲ್ದಾಣದ ಬಳಿ ಸುಟ್ಟು ಹಾಕಿದರು.ನಗರದ ಯಾವುದೇ ವ್ಯಕ್ತಿ ಗುಟ್ಕಾ ಮಾರಾಟ ಮಾಡುವುದು ಕಂಡು ಬಂದರೆ ಅಂಥವರ ವಿರುದ್ಧ ಕಾನೂನು ಪ್ರಕಾರ ದಂಡ ವಿಧಿಸಲಾಗುವುದು ಎಂದು ಅಂಗಡಿಕಾರರಿಗೆ ಪಿಎಸ್‌ಐ ಸುಂದರೇಶ ಹೊಳೆನ್ನವರ ಎಚ್ಚರಿಕೆ ನೀಡಿದರು.ಎಮ್.ಬಿ. ಪತ್ತಾರ, ಎಮ್.ಎಸ್. ತಾಳಿಕೋಟಿ, ರಾಜು ನಾಗನೂರ, ಬಸವರಾಜ, ಗುಲಬಾಳ, ಎಚ್.ಐ. ಮೆಂಡೆಗಾರ,  ಗೊಂದಿ,  ಹುಕುನ್ನವರ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.