ಶುಕ್ರವಾರ, ಮೇ 14, 2021
25 °C

ತೈಲಾ ಆಮದು ಮಾಫಿಯಾದಿಂದ ಮೊಯಿಲಿಗೆ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೈಲಾ ಆಮದು ಮಾಫಿಯಾದಿಂದ ಮೊಯಿಲಿಗೆ ಬೆದರಿಕೆ

ನವದೆಹಲಿ (ಪಿಟಿಐ): ತೈಲಾ ಆಮದು ಮಾಫಿಯಾದಿಂದ ತಮಗೆ ಬೆದರಿಕೆ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಎಂ. ವೀರಪ್ಪ ಮೊಯಿಲಿ ಶುಕ್ರವಾರ ತಿಳಿಸಿದ್ದಾರೆ.



`ನನಗೆ ಮಾತ್ರವಲ್ಲ ಹಿಂದೆ ಈ ಖಾತೆಯನ್ನು ನಿಭಾಯಿಸಿದ ಎಲ್ಲಾ ಸಚಿವರಿಗೂ ತೈಲ ಮಾಫಿಯಾದಿಂದ ಬೆದರಿಕೆ ಇತ್ತು' ಎಂದು ಮೊಯಿಲಿ ಸುದ್ದಿಗಾರರಿಗೆ ತಿಳಿಸಿದರು.



ದೇಶದಲ್ಲಿ ತೈಲಾ ಮತ್ತು ಅಡುಗೆ ಅನಿಲದ ಬೆಲೆ ಸ್ಥಿರವಾಗಿಲ್ಲ ಇದಕ್ಕೆ ಮುಖ್ಯ ಕಾರಣ ನಾವು ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿಲ್ಲ ಎಂದರು. ತೈಲಾ ಮಾಫಿಯಾದ ಬೆದರಿಕೆಗಳಿಗೆ ಎದೆಗುಂದದೆ ಕೆಲಸ ನಿರ್ವಹಿಸುತ್ತಿದ್ದೆನೆ ಎಂದು ಮೊಯಿಲಿ ನುಡಿದರು.



2030ರ ವೇಳೆಗೆ ಭಾರತ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕು,  ಇದ್ದಕ್ಕಾಗಿ ತಾವು ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ವಿವರಿಸಿದರು.



ಯಾರು ಬೆದರಿಕೆ ಹಾಕುತ್ತಿದ್ದಾರೆ ಎಂಬ ಬಗ್ಗೆ ಸಚಿವರು ಯಾವುದೇ ಮಾಹಿತಿ ನೀಡಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.