ಭಾನುವಾರ, ಜನವರಿ 26, 2020
31 °C

ಥಾಯ್ಲೆಂಡ್‌: ಹೋರಾಟ ಮುಂದುವರಿಸಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕಾಕ್‌ (ಪಿಟಿಐ): ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆ ತಾರಕಕ್ಕೇರಿದ್ದು, ದೊರೆ ಭೂಮಿಬಲ್‌ ಅದುಲ್ಯದೇಜ್ ಅವರ 86ನೇ ಹುಟ್ಟುಹಬ್ಬದ ನಡುವೆಯೂ ಪ್ರಧಾನಿ ಯಿಂಗ್ಲುಕ್‌ ಶಿನವಾತ್ರ ಅವರ ವಿರುದ್ಧ ಪ್ರತಿಭಟನೆ ಮುಂದುವರಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ.ಈ ಕುರಿತು ಬುಧವಾರ ಥಾಯ್ಲೆಂಡಿನ ರಾಷ್ಟ್ರೀಯ ಪೊಲೀಸ್‌ ಕೇಂದ್ರ ಕಚೇರಿ­ಯಲ್ಲಿ ಸಭೆ ನಡೆಸಿದ ಹೋರಾಟಗಾರರು ಪ್ರಧಾನಿ ವಿರುದ್ಧ ಹೋರಾಟ ತೀವ್ರ­ಗೊಳಿಸುವ ಕುರಿತು ತೀರ್ಮಾನಿಸಿದರು.ಪ್ರಧಾನಿ ಯಿಂಗ್ಲುಕ್ ಶಿನವಾತ್ರ ರಾಜೀನಾಮೆಗೆ ಆಗ್ರಹಿಸಿ ಕೆಲ ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಥಾಯ್ಲೆಂಡಿನ ಪ್ರಮುಖ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.

ಪ್ರತಿಕ್ರಿಯಿಸಿ (+)