ಶುಕ್ರವಾರ, ಮೇ 27, 2022
28 °C

ದ.ಕೊರಿಯಾ: ವಿಕಿರಣ ಸೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಲ್ (ಐಎಎನ್‌ಎಸ್): ದಕ್ಷಿಣ ಕೊರಿಯಾದ ಪರಮಾಣು ವಿದ್ಯುತ್ ಸಂಶೋಧನಾ ಕೇಂದ್ರವು ಭಾನುವಾರ ವಿಕಿರಣ ಸೋರಿಕೆಯ ಎಚ್ಚರಿಕೆಯನ್ನು ನೀಡಿದ್ದು, ಇದರಿಂದಾಗಿ ಅದರಲ್ಲಿದ್ದ ನೌಕರರು ತಕ್ಷಣವೇ ಜಾಗ ತೆರವು ಮಾಡಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.ಹನಾರೊದ 30 ಮೆಗಾವಾಟ್ ಸಂಶೋಧನಾ ರಿಯಾಕ್ಟನರ್‌ನಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 1.30ರ ವೇಳೆಗೆ ವಿಕಿರಣ ಸೋರಿಕೆಯನ್ನು ಪತ್ತೆಹಚ್ಚಿದ ನಂತರ ಈ ಎಚ್ಚರಿಕೆ ಸಂದೇಶವನ್ನು ನೀಡಲಾಯಿತು.ಇದಾದ ಮೇಲೆ ದಾಯೆಜಿಯಾನ್ ನಗರದಲ್ಲಿರುವ ಸರ್ಕಾರಿ ಒಡೆತನದ ಕೊರಿಯಾ ಅಣುಶಕ್ತಿ ಸಂಶೋಧನಾ ಸಂಸ್ಥೆಯಲ್ಲೂ ಮಧ್ಯಾಹ್ನ 2.32ರಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಲಾಯಿತು. ಆನಂತರ ರಿಯಾಕ್ಟರ್ ಅನ್ನು ಮುಚ್ಚಿ, ನೌಕರರನ್ನು ಹೊರಗೆ ಕಳುಹಿಸಲಾಯಿತು ಎಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.