ಬುಧವಾರ, ಏಪ್ರಿಲ್ 14, 2021
23 °C

ದಕ್ಷಿಣ ಆಫ್ರಿಕಾಕ್ಕೆ ಶಾಕ್ ನೀಡಿದ ಪಾಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಎಎಫ್‌ಪಿ): ಪಂದ್ಯ ಕೊನೆಗೊಳ್ಳಲು ಆರು ನಿಮಿಷ ಬಾಕಿ ಇರುವಾಗ ಎರಡು ಗೋಲುಗಳನ್ನು ಕಲೆ ಹಾಕಿದ ಪಾಕಿಸ್ತಾನ ಪುರುಷರ ಹಾಕಿ ತಂಡ ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 5-4ಗೋಲುಗಳಿಂದ ರೋಚಕ ಗೆಲುವು ಪಡೆಯಿತು.ಪಾಕ್ ತಂಡದ ವಾಸೀಮ್ ಅಹ್ಮದ್ ಪಂದ್ಯ ಕೊನೆಗೊಳ್ಳಲು ಮೂರು ನಿಮಿಷ ಬಾಕಿ ಇದ್ದಾಗ ಗೋಲು ಗಳಿಸಿದರೆ, ನಾಯಕ ಸೊಹೆಲಿ ಅಬ್ಬಾಸ್ 64ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ದಕ್ಷಿಣ ಆಫ್ರಿಕಾಕ್ಕೆ `ಶಾಕ್~ ನೀಡಿದರು.ನಾಲ್ಕು ಪಂದ್ಯಗಳನ್ನಾಡಿರುವ ಪಾಕ್ ಏಳು ಪಾಯಿಂಟ್ಸ್ ಹೊಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.