ಗುರುವಾರ , ಜೂನ್ 24, 2021
22 °C

ದಕ್ಷಿಣ ಆಫ್ರಿಕಾಕ್ಕೆ ಸರಣಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಕ್ಲೆಂಡ್ (ಎಎಫ್‌ಪಿ): ಆತಿಥೇಯ ನ್ಯೂಜಿಲೆಂಡ್ ನೀಡಿದ್ದ ಅಲ್ಪ ಮೊತ್ತದ ಗುರಿಯನ್ನು ಸುಲಭವಾಗಿ ಮುಟ್ಟಿದ ದಕ್ಷಿಣ ಆಫ್ರಿಕಾ ತಂಡದವರು ಇಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೆಲುವು ಸಾಧಿಸಿದರು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 3-0ರಲ್ಲಿ ಗೆದ್ದುಕೊಂಡಿತು.ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿ ಕಿವೀಸ್ ನೀಡಿದ್ದ 206 ರನ್‌ಗಳ ಗುರಿ ಮುಟ್ಟಲು ಪ್ರವಾಸಿ ತಂಡಕ್ಕೆ ಕಷ್ಟವಾಗಲಿಲ್ಲ. ಈ ತಂಡದ ಆಶೀಮ್ ಆಮ್ಲಾ (76, 89 ಎಸೆತ, 7ಬೌಂಡರಿ) ಹಾಗೂ ಅಲ್ಬೈ ಮಾರ್ಕೆಲ್ (41, 51ಎಸೆತ, 2ಬೌಂ, 3ಸಿಕ್ಸರ್) ಅವರ ಜವಾಬ್ದಾರಿಯುತ ಬ್ಯಾಟಿಂಗ್ ಇದಕ್ಕೆ ಕಾರಣವಾಯಿತು.ಇದರಿ ಪರಿಣಾಮ ಈ ತಂಡ 43.2 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು. ಮೊದಲ ವಿಕೆಟ್‌ಗೆ ಆಮ್ಲಾ ಜೊತೆಗೂಡಿದ ವೇಯ್ನ ಪಾರ್ನೆಲ್ (27, 41ಎಸೆತ, 3ಬೌಂ) ಒಟ್ಟು 80 ರನ್ ಕಲೆ ಹಾಕಿ ಬುನಾದಿಯನ್ನು ಗಟ್ಟಿಗೊಳಿಸಿದರು. ನಂತರ ಮಾರ್ಕೆಲ್ ಗೆಲುವಿನ ಸೌಧ ಕಟ್ಟಿದರು. ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಆತಿಥೇಯ ತಂಡ ಆರಂಭದಲ್ಲಿಯೇ ಸಂಕಷ್ಟ ಅನುಭವಿಸಿತು. 14 ಓವರ್‌ಗಳು ಪೂರ್ಣಗೊಳ್ಳುವ ಮುನ್ನವೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಈ ತಂಡಕ್ಕೆ ಬ್ರೆಂಡನ್ ಮೆಕ್ಲಮ್ ಆಸರೆಯಾದರು.ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್ 47 ಓವರ್‌ಗಳಲ್ಲಿ 206 (ಬ್ರೆಂಡನ್ ಮೆಕ್ಲಮ್ 47; ಮರ್ಚಂಟ್ ಲಾಂಗೆ 46ಕ್ಕೆ4). ದಕ್ಷಿಣ ಆಫ್ರಿಕಾ: 43.2 ಓವರ್‌ಗಳಲ್ಲಿ 5 ವಿಕೆಟ್‌ಗೆ 206. (ಹಾಶಿಮ್ ಆಮ್ಲಾ 76, ವೇಯ್ನ ಪಾರ್ನೆಲ್ 27, ಅಲ್ಬೈ ಮಾರ್ಕೆಲ್ 41, ಜಾನ್ ಪಾನ್ ಡುಮಿನಿ 25; ಕೇಲ್ ಮಿಲ್ಸ್ 41ಕ್ಕೆ1, ರಾಬ್ ನಿಕೊಲ್ 14ಕ್ಕೆ2). ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ ಐದು ವಿಕೆಟ್ ಗೆಲುವು ಹಾಗೂ 3-0ರಲ್ಲಿ ಸರಣಿ ಗೆಲುವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.