ಶುಕ್ರವಾರ, ಜನವರಿ 24, 2020
28 °C

ದಕ್ಷಿಣ ಆಫ್ರಿಕಾ ಮಡಿಲಿಗೆ ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಪ್‌ಟೌನ್ (ಎಎಫ್‌ಪಿ): ಆತಿಥೇಯ ದಕ್ಷಿಣ ಆಫ್ರಿಕಾ ತಂಡದವರು ಇಲ್ಲಿ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಹತ್ತು ವಿಕೆಟ್‌ಗಳ ಗೆಲುವು ಪಡೆದರು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-1ರಲ್ಲಿ ಗ್ರೇಮ್ ಸ್ಮಿತ್ ಪಡೆ ತನ್ನದಾಗಿಸಿಕೊಂಡಿತು. 2008ರ ನಂತರ ತವರು ನೆಲದಲ್ಲಿ ದಕ್ಷಿಣ ಆಫ್ರಿಕಾ ಜಯಿಸಿದ ಮೊದಲ ಸರಣಿ ಇದು.ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ತಂಡ ನೀಡಿದ್ದ ಬೃಹತ್ ಮೊತ್ತದ ಗುರಿ ಮುಟ್ಟಲು ಪ್ರವಾಸಿ ಲಂಕಾ ಪರದಾಡಿತು. ಈ ತಂಡ ಎರಡನೇ ಇನಿಂಗ್ಸ್ ನಲ್ಲಿ 107.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 342 ರನ್ ಗಳಿಸಿತು. ಇದರಿಂದ ಕೇವಲ ಒಂದು ರನ್ ಮುನ್ನಡೆ ಸಾಧಿಸಲು ಮಾತ್ರ ಈ ತಂಡಕ್ಕೆ ಸಾಧ್ಯವಾಯಿತು. ವಿಕೆಟ್ ನಷ್ಟವಿಲ್ಲದೇ ದಕ್ಷಿಣ ಆಫ್ರಿಕಾ ಈ ಗುರಿಯನ್ನು ಸುಲಭವಾಗಿ ಮುಟ್ಟಿತು. ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 139 ಓವರ್‌ಗಳಲ್ಲಿ 4 ವಿಕೆಟ್‌ಗೆ 580 ಡಿಕ್ಲೇರ್ಡ್; ಎರಡನೇ ಇನಿಂಗ್ಸ್ ವಿಕೆಟ್ ನಷ್ಟವಿಲ್ಲದೇ  2 ರನ್; ಶ್ರೀಲಂಕಾ 73.5 ಓವರ್‌ಗಳಲ್ಲಿ 239 ಹಾಗೂ ಎರಡನೇ ಇನಿಂಗ್ಸ್ 107.5  ಓವರ್‌ಗಳಲ್ಲಿ 342 (ತಿಲಾನ್ ಸಮರವೀರ ಔಟಾಗದೇ 115). ಫಲಿತಾಂಶ: ದ. ಆಫ್ರಿಕಾಕ್ಕೆ 10 ವಿಕೆಟ್ ಗೆಲುವು ಹಾಗೂ 2-1ರಲ್ಲಿ ಸರಣಿ ಜಯ.

ಪ್ರತಿಕ್ರಿಯಿಸಿ (+)