ಹೊಸಪೇಟೆ: ಸ್ಥಳೀಯ ಸಂಕ್ಲಾಪುರದ ಬಳಿ ಇತ್ತೀಚೆಗೆ ಸಂಭವಿಸಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 73 ಗ್ರಾಂ ಚಿನ್ನ ವಶ ಪಡೆಸಿಕೊಂಡಿದ್ದಾರೆ.

ಫೆಬ್ರವರಿ 22ರಂದು ಸಂಕ್ಲಾಪುರ ಬಳಿಯ ವಿನಾಯಕ ನಗರ ಬಡಾವಣೆಯಲ್ಲಿ ನಡೆದ ದರೋಡೆ ಪ್ರಕರಣದ ಕುರಿತು ತನಿಖೆ ನಡೆಸಿರುವ ಗ್ರಾಮೀಣ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ಭಾನುವಾರ ತಾಯಮನ್ನ ಗುಡಿ ಬಳಿ ಆರೋಪಿಗಳಾದ ಮಣಿಕಂಠ, ಕೆ. ಮಂಜುನಾಥ, ವಿ. ಕುಮಾರ್ ಹಾಗೂ ಮರಿಯಮ್ಮನಹಳ್ಳಿಯ ಸತೀಶಗೌಡ ಅವರನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಇಬ್ಬರು ಆರೋಪಿಗಳಾದ ಭಗತ್ಸಿಂಗ್ ಬಡಾವಣೆಯ ಲಕ್ಷ್ಮಣ, ಈಶ್ವರ ನಗರದ ದುರ್ಗೇಶಿ ಪರಾರಿಯಾಗಿದ್ದ, ಅವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

ರೂ 1.91ಲಕ್ಷ ಮೌಲ್ಯದ ಚಿನ್ನದ ಅಭರಣಗಳನ್ನು ವಶ ಪಡೆಸಿಕೊಂಡಿದ್ದು, ಡಿವೈಎಸ್ಪಿ ವಿ.ಬಿ. ಮಡಿವಾಳರ್, ಗ್ರಾಮೀಣ ಠಾಣೆಯ ಸಿಪಿಐ ವಿ.ರಘುಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐ ಜಿ.ಶಾಂತಪ್ಪ ಎಎಸ್ಐ ವಿ.ಡಿ. ಜೋಷಿ, ಸಿಬ್ಬಂದಿಯಾದ ಕೋದಂಡಪಾಣಿ, ಕೋರಿ ಕೃಷ್ಣ, ಸುರೇಶ, ಮಹ್ಮದ್ ರಫಿ, ಗಂಗಾಧರ, ಬಿ.ಫಣಿರಾಜ್, ವೀರೇಶ್, ನಾಗರಾಜ್, ಮಂಜುನಾಥ, ಕಾಳ್ಯಾ ನಾಯ್ಕ, ರಾಮಮೂರ್ತಿ ಅವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.