ಶುಕ್ರವಾರ, ಜನವರಿ 17, 2020
24 °C

ದರ್ಗಾಜೋಗಹಳ್ಳಿಯಲ್ಲಿ ಮಕ್ಕಳ ಗ್ರಾಮ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಗ್ರಾಮಸಭೆಗಳಲ್ಲಿ ಮೌಲ್ಯಯುತ ಚರ್ಚೆಗಳಿಂದ ಮಾತ್ರವೇ ಸರ್ಕಾರದ ಯೋಜನೆಗಳ ಅನುಷ್ಠಾನ ಹಾಗೂ ಗ್ರಾಮಗಳ ಸಮಸ್ಯೆ ಬಗೆಹರಿಯಲಿವೆ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಓಬದೇನ ಹಳ್ಳಿ ಮುನಿಯಪ್ಪ ಹೇಳಿದರು.ತಾಲ್ಲೂಕಿನ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ‘ಗ್ರಾಮಸಭೆಗಳಲ್ಲಿ ಭಾಗ ವಹಿಸುವುದರಿಂದ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳ ಸಂಪೂರ್ಣ ಮಾಹಿತಿ ದೊರೆಯಲಿದೆ’ ಎಂದರು.ಮಕ್ಕಳ ಗ್ರಾಮಸಭೆಗಳನ್ನು ನಡೆಸುತ್ತಿ ರುವುದು ಶ್ಲಾಘನೀಯ. ಇದರಿಂದ ಪಂಚಾಯಿತಿ ವ್ಯಾಪ್ತಿಯಲ್ಲಿನ ಶಾಲೆ ಗಳಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ನೇರವಾಗಿ ಮಕ್ಕ ಳಿಂದಲೇ ತಿಳಿದುಕೊಳ್ಳಲು ಸಹಕಾರಿ ಯಾಗಲಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ವಹಿಸಿದ್ದರು. ಉಪಾ ಧ್ಯಕ್ಷ ಡಿ.ಎನ್‌.ತಿಮ್ಮರಾಜ್‌, ತಾ.ಪಂ. ಅಧ್ಯಕ್ಷೆ  ನರಸಮ್ಮ,  ಗ್ರಾ.ಪಂ. ಸದಸ್ಯರಾದ ಎಂ.ವೆಂಕಟೇಶ್‌, ಶಶಿ ಕಲಾ, ರಂಗಮ್ಮ, ಚಂದ್ರಕಲಾ, ನಾರಾ ಯಣಮ್ಮ, ಸೌಭಾಗ್ಯಮ್ಮ, ನಾರಾ ಯಣಮ್ಮ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)