ದರ್ಶನ್ ಸಾರ್ವಜನಿಕವಾಗಿ ಪತ್ನಿಯ ಕ್ಷಮೆ ಕೋರಲಿ

ಸೋಮವಾರ, ಮೇ 20, 2019
29 °C

ದರ್ಶನ್ ಸಾರ್ವಜನಿಕವಾಗಿ ಪತ್ನಿಯ ಕ್ಷಮೆ ಕೋರಲಿ

Published:
Updated:

ನಟ ದರ್ಶನ್ ಹೆಂಡತಿಗೆ ಹೊಡೆದ ಪ್ರಕರಣದ ಹಿನ್ನೆಲೆಯಲ್ಲಿ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಹೆಂಡತಿಗೆ ಹೊಡೆಯುವುದು ಶೌರ್ಯವಲ್ಲ ಕ್ರೌರ್ಯ. ನಟ ಅಂಬರೀಷ್,  ` ಗಂಡ ಹೆಂಡತಿಗೆ ಹೊಡೆಯುವುದು, ಮಗ ತಾಯಿಗೆ ಹೊಡೆಯುವುದು ಕುಟುಂಬದಲ್ಲಿ ಸರ್ವೇ ಸಾಮಾನ್ಯ~ ಎಂದಿರುವುದು ಸರಿಯಲ್ಲ.ಮಕ್ಕಳು ದಾರಿ ತಪ್ಪಿದಾಗ ತಂದೆ ತಾಯಿ ಗದರಿಸುತ್ತಾರೆ, ಅದಕ್ಕೂ ಸರಿಹೋಗದಿದ್ದರೆ ಅತ್ಯಂತ ವಿಷಾದದಿಂದ ಬಡಿಯುತ್ತಾರೆ. ಬಡಿದು, ಬಡಿದದ್ದಕ್ಕಾಗಿ ವಿಷಾದದಿಂದ ಅಳುತ್ತಾರೆ. ಮಕ್ಕಳು ತಾಯಿಯನ್ನು ಬಡಿಯುವುದನ್ನು ಸಮರ್ಥಿಸುವುದಂತೂ ತೀರಾ ಅನ್ಯಾಯದ ವಿಷಯ. ಪ್ರೀತಿಯಿಂದ ಗೆಲ್ಲಲಾಗದವರು ಕ್ರೌರ್ಯಕ್ಕಿಳಿಯುತ್ತಾರೆ.ಭಿನ್ನಮತವನ್ನು ಸಹಿಸುವ, ಚರ್ಚಿಸುವ ಮನೋಧರ್ಮ ಮನೆ ಮನೆಗಳಲ್ಲಿ ಬೆಳೆದು ಬರಬೇಕು. ಮನೆಗಳು ಪ್ರಜಾಪ್ರಭುತ್ವದ ತಾಣಗಳಾಗಬೇಕು. ಅಪ್ಪ ಆಳುವ ಪಕ್ಷಕ್ಕೆ ಸೇರಿದ್ದರೆ, ಅಮ್ಮ, ಮಕ್ಕಳು ಕೇಳುವ ಪಕ್ಷಕ್ಕೆ ಸೇರಿರುತ್ತಾರೆ. ಅಪ್ಪನನ್ನು ಪ್ರಶ್ನಿಸದಿದ್ದರೆ ಆತ ಸರ್ವಾಧಿಕಾರಿಯಾಗುತ್ತಾನೆ.ದೊಡ್ಡ ಕುಟುಂಬಗಳ ಜನ ಹೊಂದಾಣಿಕೆಯಿಂದ ಬದುಕುತ್ತಿದ್ದರು. ಗಂಡ, ಹೆಂಡತಿ, ಮಕ್ಕಳ ಸಣ್ಣ ಕುಟುಂಬದ ಜನ ಗುದ್ದಾಡಿ ಹಾಳಾಗುತ್ತಿರುವುದು ಭೋಗಲಾಲಸೆಯಿಂದ. ದರ್ಶನ್‌ನ ತೆರೆಯ ಹಿಂದಿನ ಬದುಕು ಸರಿಯಾಗಬೇಕು.ದರ್ಶನ್ ಸಾರ್ವಜನಿಕವಾಗಿ ಪತ್ನಿಯ ಕ್ಷಮೆ ಕೋರುವುದು ಆತನ ಮನಸ್ಸಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry