ಮಂಗಳವಾರ, ಜೂನ್ 22, 2021
24 °C

ದಲಿತರ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ದೇವದುರ್ಗ ತಾಲ್ಲೂಕು ಜಾಗೀರ ಜಾಡಲದಿನ್ನಿ ಗ್ರಾಮದಲ್ಲಿ ಈಚೆಗೆ ದಲಿತರ ಮೇಲೆ ಹಲ್ಲೆ ಮಾಡಿದ 11 ಆರೋಪಿಗಳನ್ನು ಕೂಡಲೇ ಬಂಧಿಸದೇ ಇದ್ದರೆ ಮಾ. 11ರಂದು ಆ ಗ್ರಾಮದಿಂದ ಜಿಲ್ಲಾ­ಡಳಿತ ಕಚೇರಿವರೆಗೆ ಕಾಲ್ನಡಿಗೆ ಜಾಥಾ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಹೇಮರಾಜ ಆಸ್ಕಿಹಾಳ ಹಾಗೂ ಸಂಘಟನೆ ಮುಖಂಡ ಅಬ್ರಾಹಂ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆಬ್ರುವರಿ 26ರಂದು ಕ್ಷುಲ್ಲಕ ಕಾರಣಕ್ಕೆ ಆ ಗ್ರಾಮದಲ್ಲಿ ದಲಿತರ ಮೇಲೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆಲವರು ಹಲ್ಲೆ ನಡೆಸಿದ್ದಾರೆ. ಬಳಿಕ 28ರಂದು ಇದೇ ರೀತಿ ಹಲ್ಲೆಯನ್ನು ಪರಿಶಿಷ್ಟ ಪಂಗಡದ ಕೆಲವರು, ಇತರೆ ವರ್ಗದ ಕೆಲ ಜನರು ನಡೆಸಿದ್ದಾರೆ. ಹಲ್ಲೆಗೊಳಗಾದ ದಲಿತ ಕುಟುಂಬಗಳು ಗ್ರಾಮದಲ್ಲಿ ವಾಸ ಮಾಡದ ಸ್ಥಿತಿ ನಿರ್ಮಾಣ ಆಗಿದೆ. ಈಗಲೂ ಭಯದಲ್ಲಿಯೇ ವಾಸಿಸುತ್ತಿದ್ದಾರೆ. ಅನೇಕ ಬಾರಿ ಮನವಿ ಮಾಡಿದ ಬಳಿಕ ಈಗ ಪೊಲೀಸರು ರಕ್ಷಣೆ ನೀಡಿದ್ದಾರೆ ಎಂದು ಹೇಳಿದರು.ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧನ ಮಾಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಭೇಟಿ ಮಾಡಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಲಾಗಿದೆ. ಭದ್ರತೆ ಕಲ್ಪಿಸುವ ಮತ್ತು ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದರು. ಆದರೆ, ಅವರು ಆದೇಶ ನೀಡಿದ್ದರೂ ಸ್ಥಳೀಯ ಮಟ್ಟದ ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟ ಆರೋಪಿಗಳನ್ನು ಬಂಧನ ಮಾಡಿಲ್ಲ ಎಂದು ಆರೋಪಿಸಿದರು.ಸುಮಾರು 27 ಜನರ ವಿರುದ್ಧ ಜಾತಿ ನಿಂದನೆ, ದೌರ್ಜನ್ಯ ಪ್ರಕರಣ ದೂರು ದೇವದುರ್ಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆದರೆ ಪೊಲೀಸರು ಕ್ರಮ ಜರುಗಿಸಿಲ್ಲ. ಆರೋಪಿಗಳು ಶಾಸಕರ ಬೆಂಬಲಿಗರಾಗಿದ್ದು, ಪೊಲೀಸರ ಮೇಲೆ ಒತ್ತಡ ಇರಬಹುದು. ಹೀಗಾಗಿ ಬಂಧನ ಮಾಡಿಲ್ಲ ಎಂದು ಹೇಳಿದರು.ಫೆ. 26 ರಂದು ಸುರೇಶ ಎಂಬ ದಲಿತ ಯುವಕನಿಗೆ ಸೈಕಲ್ ಡಿಕ್ಕಿ ಹೊಡೆಸಿದ್ದು, ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಆ ಯುವಕನನ್ನು ಥಳಿಸಲಾಗಿದೆ. ನಿವೇಶನ ಕಬಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆ ದ್ವೇಷವೂ ದಲಿತರ ಮೇಲಿನ ದೌರ್ಜನ್ಯದಲ್ಲಿ ಹೊಗೆಯಾಡಿದೆ ಎಂದು ಹೇಳಿದರು.ಕೂಡಲೇ ಪೊಲೀಸರು ತಪ್ಪಿತಸ್ಥರನ್ನು ಬಂಧನ ಮಾಡಬೇಕು. ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಸೌಹಾರ್ದ ವಾತಾವರಣ ರೂಪಿಸಬೇಕು. ಇದೇ ಸ್ಥಿತಿ ಮುಂದುವರಿಯುವುದು, ದಲಿತರ ಭಯದಲ್ಲಿ ಬದುಕುವಂಥ ಸ್ಥಿತಿ ಹೋಗಲಾಡಬೇಕು ಎಂಬ ಆಶಯ ಸಂಘಟನೆಯದ್ದಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ದಿಶೆಯಲ್ಲಿ ಪ್ರಯತ್ನ ಮಾಡಬೇಕು. ದಲಿತರ ಉದ್ಯೋಗ ಕಲ್ಪಿಸಬೇಕು ಎಂದು ತಿಳಿಸಿದರು.ರಂಗಪ್ಪ ಜಾಡಲದಿನ್ನಿ, ಶರಣಪ್ಪ ಬಲ್ಲಟಗಿ, ತಿಮ್ಮಪ್ಪ, ಶಿವಪ್ಪ ಬಲ್ಲಿದವ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.