ಸೋಮವಾರ, ಮಾರ್ಚ್ 8, 2021
24 °C

ದಾಖಲೆ ಪರಿಶೀಲನೆಗೆ 1650 ಅಭ್ಯರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಖಲೆ ಪರಿಶೀಲನೆಗೆ 1650 ಅಭ್ಯರ್ಥಿಗಳು

ಬೆಂಗಳೂರು: ಸಿಇಟಿ ಬರೆದಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನಾ ಕಾರ್ಯಕ್ಕೆ ಶುಕ್ರವಾರ ಚಾಲನೆ ಸಿಕ್ಕಿದ್ದು, ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಸೇರಿದಂತೆ ರಾಜ್ಯದ 13 ಸಹಾಯ ಕೇಂದ್ರಗಳಲ್ಲಿ 1,650 ಅಭ್ಯರ್ಥಿಗಳು ಪರಿಶೀಲನೆಗೆ ಹಾಜರಾಗಿದ್ದಾರೆ.



ಒಟ್ಟು 1,783 ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿ ಕೊಂಡಿದ್ದರು. ಒಂದರಿಂದ 700 ರ್‍್ಯಾಂಕ್‌ವರೆಗಿನ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಲಾಯಿತು. ಜೂನ್‌ 20ರ ವರೆಗೆ  ಈ ಪ್ರಕ್ರಿಯೆ ನಡೆಯಲಿದೆ.



ಶನಿವಾರ, 701 ರಿಂದ 4 ಸಾವಿರವರೆಗೆ ರ್‍್ಯಾಂಕ್‌ ಪಡೆದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ.

 

ಅಂಕಿ ಅಂಶ

1,783 ನೋಂದಣಿ ಮಾಡಿರುವ ಅಭ್ಯರ್ಥಿಗಳು

1,650 ಪರಿಶೀಲನೆಗೆ ಹಾಜರಾದವರ ಸಂಖ್ಯೆ

700 ರ್‍ಯಾಂಕ್ ವರೆಗಿನ ವಿದ್ಯಾರ್ಥಿಗಳ ಪರಿಶೀಲನೆ ಪೂರ್ಣ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.