ದಾಳಿಂಬೆ: ಸಾಲ ಮನ್ನಾಗೆ ಆಗ್ರಹ

ಸೋಮವಾರ, ಮೇ 20, 2019
33 °C

ದಾಳಿಂಬೆ: ಸಾಲ ಮನ್ನಾಗೆ ಆಗ್ರಹ

Published:
Updated:

ಪಾವಗಡ: ದಾಳಿಂಬೆ ಬೆಳೆ ನಷ್ಟಕ್ಕೆ ಪರಿಹಾರ ಹಾಗೂ ಬೆಳೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ದಾಳಿಂಬೆ ಬೆಳೆಗಾರರ ಸಂಘದ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.ಪಟ್ಟಣದ ನಿರೀಕ್ಷಣಾ ಮಂದಿರದಿಂದ ಹೊರಟ ದಾಳಿಂಬೆ ಬೆಳೆಗಾರರ ಸಂಘದ ಕಾರ್ಯಕರ್ತರು ಮೆರವಣಿಗೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಸಂಘದ ಆಧ್ಯಕ್ಷ ವೀರಾಂಜನೇಯ ಮಾತನಾಡಿ, ತಾಲ್ಲೂಕಿನ ವ್ಯಾಪ್ತಿಯಲ್ಲಿ ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ದಾಳಿಂಬೆ ದುಂಡಾಣು ರೋಗಕ್ಕೆ ಬಲಿಯಾಗಿದೆ. ಇದರಿಂದ ಮಾಡಿದ ಸಾಲ ತೀರಿಸಲಾಗದೆ ರೈತ ಸಂಕಷ್ಟದಲ್ಲಿದ್ದಾನೆ.ಸಾಲ ವಸೂಲಿಗೆ ದಾಳಿಂಬೆ ಬೆಳೆ ಗಾರರನ್ನು ನ್ಯಾಯಾಲಯದ ಕಟಕಟೆ ಯಲ್ಲಿ  ನಿಲ್ಲಿಸಿವೆ. ತೀವ್ರ ಸಂಕಷ್ಟದಲ್ಲಿ ದಾಳಿಂಬೆ ಬೆಳೆಗಾರರ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.

ಮೆರವಣಿಗೆಯಲ್ಲಿ ತಾಲ್ಲೂಕು ದಾಳಿಂಬೆ ಬೆಳಗಾರರ ಸಂಘದ ಉಪಾಧ್ಯಕ್ಷ ಸುಬ್ಬರಾಯಪ್ಪ, ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಚೌದರಿ, ಅಂಜಿನರೆಡ್ಡಿ, ವಾಲ್ಯಾನಾಯ್ಕ, ಮರೂರು ಮುದ್ದವೀರಪ್ಪ, ಕಾಯದರ್ಶಿ ಗಳಾದ ವಾಗೀಶ್ ಹಾಗೂ ಬಸವರಾಜ್, ನರಸಿಂಹಪ್ಪ, ಕೋಟಗುಡ್ಡ ಸುರೇಶ್ ಸೇರಿದಂತೆ ನೂರಕ್ಕೂ ಅಧಿಕ ದಾಳಿಂಬೆ ಬೆಳೆಗಾರರು ಭಾಗವಹಿಸಿದ್ದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry