ಬೆಂಗಳೂರು: ಹೆಸರಾಂತ ಕಂಪೆನಿಗಳ ಹೆಸರಿನಲ್ಲಿ ನಕಲಿ ಟೀ ಶರ್ಟ್ ಮತ್ತು ಟ್ರಾಕ್ ಪ್ಯಾಂಟ್ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ನಗರ ಪೊಲೀಸರು ಇಪ್ಪತ್ತೈದು ಲಕ್ಷ ರೂಪಾಯಿ ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಂಡು ಮೂರು ಮಂದಿಯನ್ನು ಬಂಧಿಸಿದ್ದಾರೆ.

ಓ.ಟಿ ಪೇಟೆಯ ಎಸ್ಎಲ್ ಕಾಂಪ್ಲೆಕ್ಸ್ನ ನೆಲ ಮಹಡಿಯ ಅಂಗಡಿ ಸಂಖ್ಯೆ ಏಳರಲ್ಲಿರುವ ಪೂಜಾ ಕ್ರಿಯೇಷನ್ಸ್, ಮಾಮೂಲ್ಪೇಟೆಯ ಎಸ್ಬಿಎಸ್ ಕಾಂಪ್ಲೆಕ್ಸ್ನ ಒಂದನೇ ಮಹಡಿಯ ಅಂಗಡಿ ಸಂಖ್ಯೆ ಹನ್ನೊಂದರ ನವರಂಗ್ ಎಕ್ಸ್ಪೋರ್ಟ್ಸ್ ಮತ್ತು ಪಟ್ನೂಲ್ಪೇಟೆಯ ವಾಸವಿ ಕಾಂಪ್ಲೆಕ್ಸ್ನ ಅಂಗಡಿ ಸಂಖ್ಯೆ 68ರ ಸಿಟಿ ಹೊಸೈರಿ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ರಂಜಿತ್ (26), ದೀಪ್ಸಿಂಗ್ (47) ಮತ್ತು ಶಬ್ಬೀರ್ ಅಹಮ್ಮದ್ (26) ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಡಿಡಾಸ್, ರೀಬಾಕ್, ನೈಕಿ ಮತ್ತು ಪೂಮಾ ಕಂಪೆನಿಗಳ ಹೆಸರಿನಲ್ಲಿ ಅವರು ನಕಲಿ ಟೀ ಶರ್ಟ್ ಮತ್ತು ಟ್ರಾಕ್ ಪ್ಯಾಂಟ್ ಮಾರುತ್ತಿದ್ದರು ಎಂದು ಪೊಲೀಸರ ಹೇಳಿದ್ದಾರೆ.

ದರೋಡೆ ಯತ್ನ: ರೌಡಿಗೆ ಗೂಸಾ
ದರೋಡೆ ಮಾಡಲು ಯತ್ನಿಸಿದ ರೌಡಿ ಮೆಡ್ಡ ಸೋಮನನ್ನು (38) ಸಾರ್ವಜನಿಕರೇ ಹಿಡಿದು ಥಳಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿದ ಘಟನೆ ಚಾಮರಾಜಪೇಟೆಯ ಕಸ್ತೂರಬಾ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಆತ ಕಸ್ತೂರಬಾ ನಗರದ ಅಶ್ವತ್ಥಕಟ್ಟೆ ಬಳಿ ರಾತ್ರಿ 10 ಗಂಟೆ ಸುಮಾರಿಗೆ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ದರೋಡೆ ಮಾಡಲು ಯತ್ನಿಸಿದ. ಈ ವೇಳೆ ಅದೇ ಮಾರ್ಗವಾಗಿ ಬಂದ ಕೆಲ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಸೋಮನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲತಃ ಮಳವಳ್ಳಿಯವನಾದ ಆತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ದರೋಡೆ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ನಾಲ್ಕೈದು ತಿಂಗಳುಗಳ ಹಿಂದೆ ಅಶ್ವತ್ಥಕಟ್ಟೆ ಸಮೀಪವೇ ದರೋಡೆ ಮಾಡಲು ಯತ್ನಿಸಿದ್ದ ಆತನನ್ನು ಚಾಮರಾಜಪೇಟೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಗುಂಡು ಹಾರಿಸಿ ಬಂಧಿಸಿದ್ದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಆತ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಗಾಂಜಾ ಮಾರಾಟ; ಸೆರೆ
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗಂಗೊಂಡನಹಳ್ಳಿಯ ಚಾಂದ್ಪಾಷಾ (32) ಎಂಬಾತನನ್ನು ಬಂಧಿಸಿರುವ ನಗರ ಪೊಲೀಸರು 75 ಸಾವಿರ ರೂಪಾಯಿ ಮೌಲ್ಯದ ಐದು ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಆಟೊ ಚಾಲಕ ಚಾಂದ್ಪಾಷಾ ಹೊಸಕೋಟೆಯ ಅಶೋಕ್ ಕುಮಾರ್ ಎಂಬಾತನಿಂದ ಒಂದು ಕೆ.ಜಿ ಗಾಂಜಾವನ್ನು ಖರೀದಿಸಿ ಅದನ್ನು ಪಳನಿ ಎಂಬಾತನಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.