ಭಾನುವಾರ, ಮೇ 16, 2021
27 °C

ದಾಸರಹಳ್ಳಿ: ರಸ್ತೆ ಮೇಲೆ ಹರಿವ ಮೋರಿ ನೀರಿಗೆ ಮುಕ್ತಿ ನೀಡಿ

-ನಿತ್ಯ ಪ್ರಯಾಣಿಕರು . Updated:

ಅಕ್ಷರ ಗಾತ್ರ : | |

ಮಾಗಡಿ ರಸ್ತೆಯ ದಾಸರಹಳ್ಳಿ ಬಸ್ ನಿಲ್ದಾಣದ ಮುಂದೆ ಸುಮಾರು ಹತ್ತು ದಿನಗಳಿಂದ ಮೋರಿಯಿಂದ ಕೊಚ್ಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಅಲ್ಲೆ ಬಸ್‌ಗಾಗಿ ಕಾಯುವ ನೂರಾರು ಜನ ಸದಾ ನಿಂತಿರುತ್ತಾರೆ. ಅಂಗಡಿ ಮುಂಗಟ್ಟು ಇದೆ. ರಸ್ತೆ ಬದಿ ವ್ಯಾಪಾರ ಮಾಡುವ ಜನರಿದ್ದಾರೆ. ಟ್ರಾಫಿಕ್ ಪೊಲೀಸರು ಅಲ್ಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.ಆದರೆ ಇಷ್ಟು ದಿನದರೂ ಈ ಬಗ್ಗೆ ಇವರ‌್ಯಾರೂ ಪಾಲಿಕೆಯ ಗಮನ ಸೆಳೆದಿಲ್ಲವೋ  ಅಥವಾ ಪಾಲಿಕೆಯವರು ಕ್ರಮ ಕೈಗೊಂಡಿಲ್ಲವೋ ಗೊತ್ತಿಲ್ಲ. ಆದರೆ ಅಲ್ಲಿ ಸಂಚರಿಸುವವರಿಗೆ ನಿತ್ಯ ದುರ್ವಾಸನೆಯುಕ್ತ ನೀರಿನ ಮೇಲೆ ಹೋಗುವ ಕರ್ಮ.ಅದರಲ್ಲೂ ವೇಗವಾಗಿ ಕಾರು ಬಸ್‌ಗಳು ಹೋಗುವಾಗ ದ್ವಿಚಕ್ರ ವಾಹನ ಸವಾರರ ಮೇಲೆ ಕೊಚ್ಚೆ ನೀರು ಹಾರಿ ತೊಂದರೆಯಾಗುತ್ತಿದೆ. ಇದು ನಿತ್ಯ ಕಾಣುವ ಚಿತ್ರಣ. ಕೂಡಲೇ ಸಂಬಂಧಪಟ್ಟವರು ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು.

-ನಿತ್ಯ ಪ್ರಯಾಣಿಕರು .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.