`ಸಿನಿಮಾ ಸಿದ್ಧವಾಗಿದೆ. ಪ್ರಚಾರದ ತಯಾರಿ ನಡೆಸುತ್ತಿದ್ದೇವೆ. ಆದರೆ ನಾಯಕ ದಿಗಂತ್ ಮಾತ್ರ ಕೈಗೇ ಸಿಗುತ್ತಿಲ್ಲ' ಎಂದು ಅಲವತ್ತುಕೊಳ್ಳುತ್ತಿದ್ದಾರೆ ನಿರ್ದೇಶಕ ಶೇಖರ್.

ದೂದ್ಪೇಡಾ ದಿಗಂತ್ ಬಾಯಿಗೆ `ಬರ್ಫಿ'ಯ ಸಿಹಿ ಕೊಟ್ಟ ಶೇಖರ್, ಪ್ರಚಾರಕ್ಕಾಗಿ ದಿಗಂತ್ರನ್ನು ಹುಡುಕಿ ಸುಸ್ತಾಗಿದ್ದಾರೆ. ಪ್ರಚಾರದ ಯೋಜನೆ ರೂಪಿಸೋಣ ಎಂದು ಸ್ವತಃ ಹೇಳಿದ್ದ ದಿಗಂತ್ಗಾಗಿ ಶೇಖರ್ ದಿನವಿಡೀ ಕಾದು ಕುಳಿತರೂ ಅವರ ಸುಳಿವಿಲ್ಲ. ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ ಎನ್ನುವುದು ಶೇಖರ್ ಬೇಸರಕ್ಕೆ ಕಾರಣ.

ಇದುವರೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ದಿಗಂತ್ ಹಾಜರಿ ತಪ್ಪಿರಲಿಲ್ಲ. ಆದರೆ ಪ್ರತಿ ಸುದ್ದಿಗೋಷ್ಠಿಗೂ ಹತ್ತಾರು ಸಲ ಹೇಳಬೇಕಾಗುತ್ತಿತ್ತು ಎನ್ನುತ್ತಾರೆ ಶೇಖರ್. ಚಿತ್ರೀಕರಣದ ಸಂದರ್ಭದಲ್ಲಿಯೂ ದಿಗಂತ್ ಸಮಯ ಪರಿಪಾಲನೆ ಮಾಡುತ್ತಿರಲಿಲ್ಲ. ಆದರೆ ಯಾವ ವೇಳೆಗೆ ಬಂದರೂ ಶೇಖರ್ ಮಾತನಾಡದೆ ಚಿತ್ರೀಕರಣ ನಡೆಸುತ್ತಿದ್ದರಂತೆ.

ಒಂದೆರಡು ಸಲ ಸೋಲಬಹುದು. ಆದರೆ ಮತ್ತೆ ಮತ್ತೆ ಸೋಲಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಕೋಪ ಬಾರದ ತಮಗೆ ತಾಳ್ಮೆ ಮೀರಿ ಹೋಗಿದೆ ಎನ್ನುವ ಶೇಖರ್, ದಿಗಂತ್ ಅಸಹಕಾರದ ವಿರುದ್ಧ ಸುದ್ದಿಗೋಷ್ಠಿ ನಡೆಸಲು ಮುಂದಾಗಿದ್ದಾರೆ.

ಆಗಸ್ಟ್ 9ರಂದು ಚಿತ್ರ ಬಿಡುಗಡೆಗೆ ಉದ್ದೇಶಿಸಿರುವ ಅವರು, ತಮ್ಮ ಚಿತ್ರದ ನಾಯಕನ ಅನುಪಸ್ಥಿತಿಯಲ್ಲಿಯೇ ಪ್ರಚಾರ ಮುಂದುವರಿಸಲು ತೀರ್ಮಾನಿಸಿದ್ದಾರೆ. ಸಿನಿಮಾ ಗೆಲ್ಲುವ ಬಗ್ಗೆ ಅವರಿಗೆ ಚಿಂತೆಯೇ ಇಲ್ಲವಂತೆ. ಚಿತ್ರದ ಕಥೆಯೇ ನಾಯಕನಾಗಿರುವುದರಿಂದ ನೂರಕ್ಕೆ ನೂರೈವತ್ತರಷ್ಟು ಗೆಲ್ಲುವ ನಂಬಿಕೆ ಇದೆ ಎನ್ನುವುದು ಶೇಖರ್ ಆತ್ಮವಿಶ್ವಾಸ.

ಫೋನ್ ಕರೆ ಸ್ವೀಕರಿಸದ ದಿಗಂತ್ ಪ್ರಚಾರಕ್ಕೆ ಬರುತ್ತೇನೆ ಎಂದು ಆಗಾಗ್ಗೆ ಸಂದೇಶ ಕಳುಹಿಸುತ್ತಾರಂತೆ. ಆದರೆ ನುಡಿದಂತೆ ನಡೆಯುವುದಿಲ್ಲ. ದಿಗಂತ್ ಕೈಯಲ್ಲಿ ಕೆಲವು ಸಿನಿಮಾಗಳಿದ್ದರೂ ಚಿತ್ರೀಕರಣ ಶುರುವಾಗಿಲ್ಲ. ಇಷ್ಟು ಬಿಡುವಾಗಿದ್ದರೂ ಪ್ರಚಾರಕ್ಕೆ ಮಾತ್ರ ಬರುತ್ತಿಲ್ಲ. ಕೊನೆಯ ಹಂತದಲ್ಲಿ ಹೀಗೆ ಕೈಕೊಟ್ಟರೆ ನಾನೇನು ಮಾಡುವುದು ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಶೇಖರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.