ಸೋಮವಾರ, ಮೇ 16, 2022
27 °C

ದುಂದು ವೆಚ್ಚಕ್ಕೆ ಕಡಿವಾಣವಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುನವಳ್ಳಿ (ತಾ. ಸವದತ್ತಿ): ತಾಲ್ಲೂಕಿನ ಮದ್ಲೂರ ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ನಿಮಿತ್ತ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 51 ಜೋಡಿ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟರು.

ಸಮಾರಂಭದದಲ್ಲಿ ಮುನವಳ್ಳಿಯ ಮುರಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದುಂದುವೆಚ್ಚ ತಪ್ಪಿಸಿ ಬಡವರಿಗೆ ಅನುಕೂಲವಾಗಲೆಂದು ಸಾಮೂಹಿಕ ವಿವಾಹ ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ಸಮಾಜದಲ್ಲಿ ಬಡವ- ಶ್ರೀಮಂತ, ಮೇಲು ಕೀಳು, ಜಾತಿ ಧರ್ಮ ಇತ್ಯಾದಿ ಬೇಧಭಾವವನ್ನು ತೊಡೆದು  ಹಾಕಿ ಸಮಾನತೆ, ಸಹಬಾಳ್ವೆ ಮತ್ತು ಶಾಂತಿ ನೆಮ್ಮದಿಯ ಜೀವನಕ್ಕೆ ಪ್ರೇರಣೆಯಾಗಿದೆ ಎಂದು ನುಡಿದರು.ನೂತನವಾಗಿ ದಾಂಪತ್ಯಕ್ಕೆ ಹೆಜ್ಜೆ ಇಡುತ್ತಿರುವ ವಧು ವರರು ಉತ್ತಮ ಸಮಾಜ ನಿರ್ಮಿಸುವತ್ತ ಗಮನ ನೀಡಬೇಕು ಎಂದು ಆಶೀರ್ವದಿಸಿದರು.ಇಂಚಗೇರಿಮಠದ ಪ್ರಭು ಮಹಾರಾಜರು ಅಧ್ಯಕ್ಷತೆ ವಹಿಸಿದ್ದರು. ದೇಶನೂರ ಸಾರ್ವಜನಿಕ ವಿರಕ್ತಮಠದ ಧರ್ಮಗುರು ಮೆನಿನೋ, ಮದ್ಲೂರ ಶಾಂತಿಮಠದ ಭೀಮಾನಂದ ಸ್ವಾಮೀಜಿ ಮತ್ತು ಗೊರಗುದ್ದಿ ಮಠದ ತುಕಾರಾಮ ಸಾಧು ಮಹಾರಾಜರು ಉಪಸ್ಥಿತರಿದ್ದರು.ಗ್ರಾ.ಪಂ. ಅಧ್ಯಕ್ಷ ಫಕೀರಪ್ಪ ಹದ್ದನ್ನವರ, ಸದಸ್ಯರಾದ ಅಶೋಕ ಕುರಿ, ಫಕ್ರುಸಾಬ್ ದೊಡಮನಿ, ಪಾಂಡು ಕಲಕುಟ್ರಿ, ಮಲ್ಲೇಶ ಕಲಕುಟ್ರಿ, ಸಿದ್ಧಾರೂಢ ಬಿಲಕಂಚಿ, ಮಹಾದೇವ ಪಟಾತ, ಜಿ.ಎಸ್. ದೊಡಮನಿ, ಬಸವರಾಜ ಪೂಜೇರ, ಬಾಬು ಪರಾಶಿ, ಲಕ್ಷ್ಮಣ್ಣ ಹೊಟ್ಟಿ, ಎಮ್.ಎಮ್. ಗೊರವನಕೊಳ್ಳ, ಸಿದ್ದಪ್ಪ ಹೂಲಿ ಮತ್ತು ಮಾರುತಿ ಕುರಿ ಮತ್ತಿತರರು ಭಾಗವಹಿಸಿದ್ದರು.

ಬಸವರಾಜ ಮನಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಿ.ಎಸ್. ದೊಡಮನಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಬಡಿಗೇರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.