ಗುರುವಾರ , ಮೇ 6, 2021
33 °C

ದುಂದು ವೆಚ್ಚಕ್ಕೆ ಕಡಿವಾಣ ಅಗತ್ಯ: ಸಿದ್ದಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬಿಬಿಎಂಪಿಯಲ್ಲಿ ಯಾವುದೇ ಕೆಲಸಕ್ಕೂ ದುಪ್ಪಟ್ಟು ಹಣ ವೆಚ್ಚ ಮಾಡಲಾಗುತ್ತಿದೆ. ಒಂದು ರೂಪಾಯಿ ಖರ್ಚಾಗುವ ಕೆಲಸಕ್ಕೂ 2 ರೂಪಾಯಿ ವ್ಯಯವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ~.

ಈ ರೀತಿ ಪಾಲಿಕೆಯ ಆಡಳಿತ ವೈಖರಿಯ ಬಗ್ಗೆ ಬೆಳಕು ಚೆಲ್ಲಿದ್ದು ಬೇರಾರೂ ಅಲ್ಲ, ಸ್ವತಃ ಪಾಲಿಕೆ ಆಯುಕ್ತ ಸಿದ್ದಯ್ಯ.ಪಾಲಿಕೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, `ವೈಯಕ್ತಿಕವಾಗಿ ಹೇಳುವುದಾದರೆ ಪಾಲಿಕೆಯಲ್ಲಿ ಒಂದು ರೂಪಾಯಿ ಖರ್ಚಾಗುವ ಕೆಲಸಕ್ಕೆ 2 ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಹಿಂದಿನಿಂದಲೂ ಈ ಕೆಟ್ಟ ಅಭ್ಯಾಸ ನಡೆದುಬಂದಿದೆ. ಇದಕ್ಕೆ ಕಡಿವಾಣ ಹಾಕಿದ್ದೇ ಆದರೆ ಪಾಲಿಕೆಯ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಈಗಲೂ ಪರಿಸ್ಥಿತಿ ಕೈಮೀರಿಲ್ಲ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಲು ಎಲ್ಲರೂ ಸಹಕರಿಸಬೇಕು~ ಎಂದು ಮನವಿ ಮಾಡಿದರು.`2008-09ನೇ ಸಾಲಿನಲ್ಲಿ ಕೈಗೊಂಡಿದ್ದ 1,937 ಕಾಮಗಾರಿಗಳು ಆರಂಭವೇ ಆಗಿರಲಿಲ್ಲ. ಹಾಗಾಗಿ ಆ ಕಾಮಗಾರಿಗಳನ್ನು ರದ್ದುಪಡಿಸಲಾಯಿತು. ಸುಮಾರು 2,600 ಕೋಟಿ ರೂಪಾಯಿ ವೆಚ್ಚದ 3,931 ಚಾಲ್ತಿ ಕಾಮಗಾರಿಗಳನ್ನು ಮರು ಮೌಲ್ಯಮಾಪನ ಮಾಡುವಂತೆ ಆದೇಶಿಸಲಾಯಿತು. ಆಗ ಸಲ್ಲಿಕೆಯಾಗಿದ್ದು, ಕೇವಲ 1,600 ಕಾಮಗಾರಿಗಳಿಗೆ ಸಂಬಂಧಪಟ್ಟ ಕಡತಗಳು ಮಾತ್ರ~ ಎಂದರು.`ಸುಮಾರು 10 ವಿಶೇಷ ತಂಡಗಳನ್ನು ರಚಿಸಿ ಈ ಕಾಮಗಾರಿಗಳನ್ನು ತಪಾಸಣೆ ನಡೆಸಿದಾಗ ವಾಸ್ತವದಲ್ಲಿ ಚಾಲ್ತಿಯಲ್ಲಿದ್ದುದು 500 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳು ಮಾತ್ರ. ಪಾಲಿಕೆಗೆ ಹೊರೆಯಾಗಲಿದ್ದ ಸುಮಾರು 2,000 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಕೈಬಿಡುವ ಮೂಲಕ ಪಾಲಿಕೆಗೆ ಉಳಿತಾಯ ಮಾಡಲಾಯಿತು~ ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.