ಬುಧವಾರ, ಜನವರಿ 22, 2020
21 °C

ದುಬಾರಿ ಮುದ್ರಿತ ಕಾರ್ಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ರಿತ (ಪ್ರಿಂಟೆಡ್) ಕಾರ್ಡ್‌ಗೆ 6 ರೂ. ಸ್ಟಾಂಪ್ ಹಚ್ಚಬೇಕು ಎಂಬುದು ಪೋಸ್ಟಲ್ ನಿಯಮ. ಇಂದು 20 ಗ್ರಾಂ ತೂಗುವ ಒಂದು ಕವರ್ ಕೂಡ ಬರೇ 5 ರೂ. ಗೆ ಹಳ್ಳಿಯಿಂದ ದಿಲ್ಲಿಗೆ ಪ್ರಯಾಣ ಬೆಳೆಸುತ್ತದೆ.ಕೊರಿಯರ್‌ಗಳಂತೂ ನಾ ಮುಂದು ತಾ ಮುಂದು ಎನ್ನುತ್ತ ಸ್ಪರ್ಧಾತ್ಮಕ ದರದಲ್ಲಿ ಸರ್ವಿಸ್ ಕೊಡಲು ಮುಂದಾಗಿವೆ. ಕಾರ್ಡ್ ಮುದ್ರಿತವಾಗಿದೆ ಎಂದ ಮಾತ್ರಕ್ಕೆ 6 ರೂ. ಸ್ಟಾಂಪ್ ಹಚ್ಚಬೇಕಾದುದು ದುಬಾರಿಯಲ್ಲವೇ? ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮರು ಚಿಂತನೆ ನಡೆಸಲಿ.

 

ಪ್ರತಿಕ್ರಿಯಿಸಿ (+)