ಸೋಮವಾರ, ಮಾರ್ಚ್ 1, 2021
31 °C

ದುಬೈ ಓಪನ್‌್: ಫೈನಲ್‌ಗೆ ಥಾಮಸ್‌ ಬೆರ್ಡಿಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ ಓಪನ್‌್: ಫೈನಲ್‌ಗೆ ಥಾಮಸ್‌ ಬೆರ್ಡಿಕ್‌

ದುಬೈ (ಪಿಟಿಐ): ಜೆಕ್‌ ಗಣರಾಜ್ಯದ  ಥಾಮಸ್‌ ಬೆರ್ಡಿಕ್‌ ಇಲ್ಲಿ ನಡೆಯು ತ್ತಿರುವ  ದುಬೈ ಡ್ಯೂಟಿ ಫ್ರೀ ಟೆನಿಸ್‌ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ.ಶುಕ್ರವಾರ ನಡೆದ ಟೂರ್ನಿಯ ಮೊದಲ ಸೆಮಿಫೈನಲ್‌ ಹೋರಾಟ ದಲ್ಲಿ ಬೆರ್ಡಿಕ್‌ 7–5, 7–5ರಲ್ಲಿ ಜರ್ಮನಿಯ ಫಿಲಿಪ್‌ ಕೊಹ್ಲ್‌ಶ್ರೇಬರ್‌ ಅವರನ್ನು ಮಣಿಸಿದರು.ಪಂದ್ಯದ ಉದ್ದಕ್ಕೂ ಪರಿಣಾಮಕಾರಿ ಹೊಡೆತಗಳ ಮೂಲಕ ಮಿಂಚಿದ ಬೆರ್ಡಿಕ್‌, ಆಟದ ವೇಳೆ ಎದುರಾಳಿ ಆಟಗಾರ ಒಡ್ಡಿದ  ತೀವ್ರ ಪೈಪೋಟಿ ಯನ್ನು ಮೆಟ್ಟಿನಿಲ್ಲುವ ಮೂಲಕ ಜಯ ತಮ್ಮದಾಗಿಸಿ ಕೊಂಡರು.ಸೆಮಿಗೆ ಫೆಡರರ್‌, ಜೊಕೊವಿಕ್‌: ವಿಶ್ವದ 8ನೇ ರ್‍ಯಾಂಕ್‌ನ ಆಟಗಾರ ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌್ ಹಾಗೂ ಎರಡನೇ ರ್‍ಯಾಂಕ್‌ನ ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಕ್‌ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಗುರುವಾರ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಫೆಡರರ್‌  6–2, 6–2ರಲ್ಲಿ ಜೆಕ್‌ ಗಣರಾಜ್ಯದ ಲುಕಾಸ್ ರೊಸೊಲ್‌ ಅವರನ್ನು  ಸುಲಭವಾಗಿ ಸೋಲಿಸಿದರು.ಟೂರ್ನಿಯುದ್ದಕ್ಕೂ ಉತ್ತಮ ಲಯ ಕಾಪಾಡಿಕೊಂಡು ಬಂದಿರುವ ಫೆಡರರ್‌  ಈ ಪಂದ್ಯದಲ್ಲಿಯೂ ತಮ್ಮ ಹಿಂದಿನ ಲಯದಲ್ಲೇ ಆಡಿದರು. ಪಂದ್ಯದ ಎರಡೂ ಸೆಟ್‌ಗಳಲ್ಲಿ ಪ್ರಭುತ್ವ ಸಾಧಿಸಿದ ಅವರು,  ಎದುರಾಳಿ ಆಟಗಾರನಿಗೆ ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳಲು ಅವಕಾಶ ನೀಡದೆ ಗೆಲುವಿನ ಸಿಹಿ ಕಂಡರು.ದಿನದ ಮತ್ತೊಂದು ಎಂಟರ ಘಟ್ಟದ ಪಂದ್ಯದಲ್ಲಿ ರಷ್ಯಾದ ಮೈಕೆಲ್‌ ಯೂಜ್ನಿ  ಅನಾರೋಗ್ಯದ ಕಾರಣ ಪಂದ್ಯದಿಂದ ಹಿಂದೆ ಸರಿದರು. ಹೀಗಾಗಿ ಜೊಕೊವಿಕ್‌ ವಾಕ್‌ ಓವರ್‌ ಪಡೆದು ನಾಲ್ಕರ ಘಟ್ಟ ತಲುಪಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.