ಬೆಂಗಳೂರು: ತಮ್ಮ ವಿರುದ್ದ ದಾಖಲಿಸಲಾಗಿರುವ ಭೂಹಗರಣದ ದೂರು ರಾಜಕೀಯ ಪ್ರೇರಿತವಾದದ್ದು, ಇದರ ವಿರುದ್ದ ಕಾನೂನು ಹೋರಾಟ ನಡೆಸುವುದಾಗಿ ಗೃಹ ಹಾಗೂ ಸಾರಿಗೆ ಸಚಿವ ಆರ್.ಅಶೋಕ ಅವರು ಶುಕ್ರವಾರ ಹೇಳಿದರು.

ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ನನ್ನ ವಿರುದ್ದ ದೂರು ದಾಖಲಿಸುತ್ತಿರುವುದು ಇದು ಮೂರನೇಯ ಬಾರಿ. ದೂರಿನ ಹಿಂದೆ ರಾಜಕೀಯ ಕೈವಾಡವಿದೆ ಇದರ ವಿರುದ್ದ ತಾವು ಕಾನೂನು ಸಮರ ನಡೆಸುವುದಾಗಿ ತಿಳಿಸಿದರು.

ಭೂಹಗರಣಕ್ಕೆ ಸಂಬಂಧಿಸಿದಂತೆ ಅಶೋಕ ಅವರ ವಿರುದ್ದ ವಕೀಲ ಜಯಪ್ರಕಾಶ ಹಿರೇಮಠ ಅವರು ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು ಗುರುವಾರ ನಡೆಸಿದ ಲೋಕಾಯುಕ್ತ ವಿಶೇಷ ಕೋರ್ಟ್, ಅಶೋಕ ಅವರ ವಿರುದ್ಧ ತನಿಖೆ ನಡೆಸಿ, ತನಿಖೆಯ ವರದಿಯನ್ನು ನವೆಂಬರ್ 5ರ ಒಳಗೆ ಕೋರ್ಟ್ಗೆ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.

ನಗರದ ಲೊಟ್ಟೆಗೊಲ್ಲಹಳ್ಳಿಯ ಎರಡು ಪ್ರತ್ಯೇಕ ಸರ್ವೆ ನಂಬರ್ಗಳ 23 ಗುಂಟೆ ಭೂಮಿಯನ್ನು ಖರೀದಿಸಿ, ನಂತರ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಆದೇಶ ಪಡೆದ ಆರೋಪ ಈ ದೂರಿನಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.