ಭಾನುವಾರ, ಮೇ 9, 2021
26 °C

ದೇಗುಲಗಳ ಜೀರ್ಣೋದ್ಧಾರಕ್ಕಾಗಿ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಪ್ರತಿ ಗ್ರಾಮಗಳ ಸರ್ವಧರ್ಮೀಯ ಹಳೇ ದೇಗುಲಗಳ ಜೀರ್ಣೋದ್ಧಾರಕ್ಕಾಗಿ ಕ್ರಮ ಕೈಗೊಳ್ಳುವುದಾಗಿ ಶಾಸಕ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ಶುಕ್ರವಾರ, ಗಣಿ ಪುನರ್ವಸತಿ ಕೇಂದ್ರದಲ್ಲಿ ನಡೆದ ಶ್ರೀ ಒಪ್ಪತ್ತೇಶ್ವರ ಮಠದ ನೂತನ ಕಟ್ಟಡದ ಅಡಿಗಲ್ಲು ನೆರವೇರಿಸಿ ಮಾತನಾಡಿದರು.ಈ ಮಠದ ಕಟ್ಟಡಕ್ಕಾಗಿ ತುರ್ತಾಗಿ ಲಕ್ಷ ರೂಪಾಯಿ ಹಾಗೂ ಹಂತ ಹಂತವಾಗಿ 5 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು ಎಂದು ಹೇಳಿದರು.ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಗಣಿ ಗ್ರಾಮದಲ್ಲಿ ಜನತೆಯಲ್ಲಿ ಮೂಡಿರುವ ದ್ವೇಷ, ಅಸೂಯೆ ನಿವಾರಣೆಯಾಗಬೇಕಿದ್ದು, ಆ ನಿಟ್ಟಿನಲ್ಲಿ ಮಠದಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಕುಂಬಾರ, `ನಮ್ಮ ದೇಶದ ಯೋಗ, ಆಧ್ಮಾತ್ಮ ಕಲಿಯಲು ವಿದೇಶಿಯರು ಮುಗಿಬೀಳುತ್ತಿದ್ದು, ಹೆಮ್ಮೆಯ ಸಂಗತಿಯಾಗಿದೆ. ವಿದೇಶ ಸಂಸ್ಕೃತಿ ದ್ರಾಕ್ಷ (ದ್ರಾಕ್ಷಾರಸ) ಸಂಸ್ಕೃತಿಯಾದರೇ ನಮ್ಮದು ರುದ್ರಾಕ್ಷ ಸಂಸ್ಕೃತಿ ಎಂದರು.ಸಿದ್ಧವೀರ ಸ್ವಾಮೀಜಿ, ಫಕೀರೇಶ್ವರ ಸ್ವಾಮೀಜಿ, ಪ್ರಶಾಂತ ದೇವರು, ಗುರುಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ರೈತ ಮುಖಂಡ ಬಸವರಾಜ ಕುಂಬಾರ, ಭೂನ್ಯಾಯ ಮಂಡಳಿ ಸದಸ್ಯ ಪ್ರಶಾಂತ ಪವಾರ, ತಹಸೀಲ್ದಾರ ಮಹಾದೇವ ಮುರಗಿ, ಸುಭಾಷಚಂದ್ರ ಅವಟಿ, ಭೀಮಣ್ಣ ಗೋಡಿಹಾಳ, ಲಕ್ಷ್ಮಣ ಬಡಿಗೇರ, ಸುಶೀಲಾ ಪವಾರ, ರಂಗನಗೌಡ ಪಾಟೀಲ, ಮೊದಲಾದವರಿದ್ದರು.ಇದಕ್ಕೂ ಮೊದಲು 108 ಸುಮಂಗಲೆಯರಿಂದ ಕುಂಭದ ಮೆರವಣಿಗೆ ಡೊಳ್ಳುಗಳ ನಿನಾದದ ಮಧ್ಯೆ ಜರುಗಿತು. ಶ್ರೀಶೈಲ ಪಟ್ಟಣಶೆಟ್ಟಿ ಸ್ವಾಗತಿಸಿದರು. ಫಕೀರೇಶ್ವರ ಶ್ರೀಗಳು ನಿರೂಪಿಸಿದರು. ರಮೇಶ ಚವ್ಹಾಣ ವಂದಿಸಿದರು.  ವಿವಿಧ ಶ್ರೀಗಳನ್ನು, ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.