ಮಂಗಳವಾರ, ಜನವರಿ 21, 2020
28 °C

ದೇವದಾಸಿ ಪದ್ಧತಿ ವಿರುದ್ಧ ಜನಜಾಗೃತಿ

ಪ್ರಜಾವಾಣಿ ವಾರ್ತೆ, Updated:

ಅಕ್ಷರ ಗಾತ್ರ : | |

ರಾಯಚೂರು: .ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ತೊಂಡಿಹಾಳ ಗ್ರಾಮದ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ದೇವದಾಸಿ ಅನಿಷ್ಟ ಪದ್ಧತಿ ಹೋಗಲಾಡಿಸಲು ಜನಜಾಗೃತಿ ಕಾರ್ಯಕ್ರಮ ನಡೆಯಿತು

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ದೇವದಾಸಿ ಪುನರ್ವಸತಿ ಯೋಜನೆ ಜಿಲ್ಲಾ ಘಟಕದವತಿಯಿಂದ ಆಯೋಜಿಸಲಾಗಿತ್ತು

.

ಬೀದಿ ನಾಟಕ, ಕರ ಪತ್ರ ವಿತರಣೆ, ಧ್ವನಿವರ್ಧಕ ಮೂಲಕ 1982 ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ ಹಾಗೂ ತಿದ್ದುಪಡಿ ಕಾಯ್ದೆ 2009ರ ಪ್ರಕಾರ ಯಾವುದೇ ಹೆಣ್ಣು ಮಗುವಿಗೆ, ಮಹಿಳೆಗೆ ಮುತ್ತು ಕಟ್ಟಿ ದೇವದಾಸಿಯನ್ನಾಗಿ ಮಾಡುವುದು ಜಾಮೀನು ರಹಿತ ಅಪರಾಧ. ಪ್ರೋತ್ಸಾಹಿಸಿದವರಿಗೆ 2ರಿಂದ 5 ವರ್ಷ ಜೈಲು ಶಿಕ್ಷೆ, 2ರಿಂದ 10 ಸಾವಿರ ದಂಡ ವಿಧಿಸುವುದು ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಜನಜಾಗೃತಿ ರ‌್ಯಾಲಿಯನ್ನೂ ನಡೆಸಲಾಯಿತು ಎಂದು ದೇವದಾಸಿ ಪುನರ್ವಸತಿ ಯೋಜನೆ ಯೋಜನಾಧಿಕಾರಿ ಗೋಪಾಲ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)