ವಾಷಿಂಗ್ಟನ್ (ಪಿಟಿಐ): ವೀಸಾ ವಂಚನೆ ಆರೋಪದಡಿ ಈಚೆಗೆ ಬಂಧಿಸಲಾಗಿದ್ದ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ರಾಯಭಾರತ್ವ ಮಾನ್ಯತೆಯ ಕುರಿತು ವಿಶ್ವಸಂಸ್ಥೆ ಕಳುಹಿಸಿದ ದಾಖಲೆಗಳನ್ನು ಪರಿಶೀಲಿಸು ತ್ತಿರುವುದಾಗಿ ಅಮೆರಿಕ ತಿಳಿಸಿದೆ.

‘ದೇವಯಾನಿ ಕುರಿತು ವಿಶ್ವಸಂಸ್ಥೆ ಕಳುಹಿಸಿದ ದಾಖಲೆಗಳನ್ನು ಶುಕ್ರವಾರ ಸ್ವೀಕರಿಸಲಾಗಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ವಿದೇಶಾಂಗ ಇಲಾಖೆ ವಕ್ತಾರರೊಬ್ಬರು ತಿಳಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. ನ್ಯೂಯಾರ್ಕ್ನ ಭಾರತೀಯ ರಾಜತಾಂತ್ರಿಕ ಕಚೇರಿಯಲ್ಲಿ ಉಪ ಕಾನ್ಸುಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದೇವಯಾನಿ ಅವರನ್ನು ವೀಸಾ ವಂಚನೆ ಆರೋಪದಡಿ ಸ್ಥಳೀಯ ಕೋರ್ಟ್ ನೀಡಿದ ಆದೇಶದ ಅನ್ವಯ ಈ ತಿಂಗಳ 12ರಂದು ಬಂಧಿಸಲಾಗಿತ್ತು.

ನಂತರ ಜಾಮೀನಿನ ಮೇಲೆ ದೇವಯಾನಿ ಅವರನ್ನು ಬಿಡುಗಡೆ ಮಾಡಲಾಗಿದ್ದು, ರಾಜತಾಂತ್ರಿಕ ಪಾಸ್ ಪೋರ್ಟ್ ಅನ್ನು ಹಾಜರುಪಡಿಸಲು ನ್ಯೂಯಾರ್ಕ್ ಕೋರ್ಟ್ ಆದೇಶಿಸಿತ್ತು. ದೇವಯಾನಿ ಬಂಧನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಭಾರತ ನಂತರ ಅವರನ್ನು ವಿಶ್ವಸಂಸ್ಥೆಗೆ ವರ್ಗಾವಣೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.