ಬುಧವಾರ, ಏಪ್ರಿಲ್ 14, 2021
29 °C

ದೇವರು ಧರ್ಮದ ಹೆಸರಿನಲ್ಲಿ ಮೋಸದ ಪ್ರವೃತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವರು ಧರ್ಮದ ಹೆಸರಿನಲ್ಲಿ ಮೋಸದ ಪ್ರವೃತ್ತಿ

ಚಲನಚಿತ್ರ ನಟ ಉಪೇಂದ್ರ ವಿಷಾದಬೆಂಗಳೂರು
:  `ದೇವರು ಧರ್ಮದ ಹೆಸರಿನಲ್ಲಿ ಜನರನ್ನು ಮೋಸ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ~ ಎಂದು ಚಲನಚಿತ್ರ ನಟ ಉಪೇಂದ್ರ ಹೇಳಿದರು.ಜೂಮ್ 22 ಪಬ್ಲಿಕೇಶನ್ಸ್ ಹೊರತಂದಿರುವ ಕೆ.ಪ್ರವೀಣ ನಾಯಕ ಅವರ `ದೇವರು-ಧರ್ಮ ಏನಿದರ ಮರ್ಮ?~ ಪುಸ್ತಕವನ್ನು ಗುರುವಾರ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.`ಮೂಡ ನಂಬಿಕೆಗಳನ್ನು ಬಿತ್ತುವ ಹಾಗೂ ದೇವರ ಹೆಸರಿನಲ್ಲಿ ಮೋಸ ಮಾಡುವ ಜನರು ಸಮಾಜದಲ್ಲಿ ತುಂಬಿದ್ದಾರೆ. ದೇವರು ಹಾಗೂ ಧರ್ಮದ ಬಗ್ಗೆ ಆಳವಾದ ಅಧ್ಯಯನ ಮಾಡಿ ಪ್ರವೀಣ ಅವರು ಪುಸ್ತಕವನ್ನು ರಚಿಸಿದ್ದಾರೆ. ಪುಸ್ತಕದಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವ ಅವರ ಕಾರ್ಯ ಶ್ಲಾಘನೀಯ~ ಎಂದರು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, `ಹೊಸ ಆಲೋಚನೆ ಹಾಗೂ ಚಿಂತನೆಗೆ ಪ್ರೇರೇಪಿಸುವಂತಾಗಿದ್ದು, ಹಲವು ಪ್ರಶ್ನೆಗಳನ್ನು ಎತ್ತಿರುವ ಈ ಪುಸ್ತಕವು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟವಾದ ಪುಸ್ತಕವಾಗಿದೆ~ ಎಂದು ಹೇಳಿದರು.`ದೇವರು ಹಾಗೂ ಧರ್ಮದ ಎಂಬ ವಿಷಯದ ಕುರಿತು ಹಲವು ಪುಸ್ತಕಗಳಿದ್ದು, ಅವುಗಳ ಸಾಲಿಗೆ ಈ ಪುಸ್ತಕ ಸೇರಲಿದೆ~ ಎಂದರು.ನಟ ಎಂ.ಡಿ.ಕೌಶಿಕ್ ಜನರನ್ನು ಮೋಸ ಮಾಡುವ ಕುರಿತು ಪ್ರಾಯೋಗಿಕವಾಗಿ ಮ್ಯಾಜಿಕ್ ಪ್ರದರ್ಶಿಸಿದರು. ಸಮಾರಂಭದಲ್ಲಿ ಕೃತಿಕಾರ ಕೆ.ಪ್ರವೀಣ ನಾಯಕ ಮೊದಲಾದವರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.