ಕಾಡು ದಾರಿಯಲ್ಲಿ ಕಾಲು ಇಳಿಸಲು ವಾಹನದಿಂದ ಇಳಿದರೆ ಇರಿಯುವ ಇರಾದೆಯಿಂದಲೇ ಮೂಗೆತ್ತಿಕೊಂಡು ಬರುವ, ಗಾರ್ಡುಗಳ ಸನ್ನೆಯನ್ನು ಆಧರಿಸಿ ಅಲ್ಲೇ ನಿಂತು ಮೂತಿ ತಿರುಗಿಸುವ, ಒಂದೊಂದೂ ಕನಿಷ್ಠ ಏಳೆಂಟು ನೂರು ಕೆ.ಜಿ. ತೂಗುವ ದೈತ್ಯ ದೇಹಿ ಘೇಂಡಾಮೃಗಗಳು. ಕೆಲವು ಒಂಟಿ ಕೊಂಬನ್ನೆತ್ತಿಕೊಂಡು ನಿಂತಾಗ, ಅವು ಮರಿಯಾಗಿದ್ದರೆ ನೋಡುಗರಿಗೆ ಮುದ್ದಾಡುವ ಉಮೇದು ಬಂದರೂ ಆಶ್ಚರ್ಯವೇನಿಲ್ಲ.

ಭಾರತದಲ್ಲಿ ಒಂಟಿ ಕೊಂಬಿನ ಘೇಂಡಾಗಳನ್ನು ಸಾಕುತ್ತಿರುವ ‘ಪೋಬಿತಾರ’ ರಾಷ್ಟ್ರೀಯ ಉದ್ಯಾನವನ ಸಫಾರಿ ಪ್ರಿಯರಿಗೆ ಘೇಂಡಾದರ್ಶನ ಮಾಡಿಸುತ್ತಿದೆ. ಈಶಾನ್ಯ ರಾಜ್ಯವಾದ ಸಿಕ್ಕಿಂನ ಬ್ರಹ್ಮಪುತ್ರಾ ನದಿ ದಂಡೆಯ ಮೇಲೆ ‘ಮೊರಿಗಾಂವ್’ ಜಿಲ್ಲೆಯ ‘ಮಯಾಂಗ್’ ಎನ್ನುವ ಹಳ್ಳಿಯ ಮಗ್ಗುಲಿಗೆ ಇರುವ ಈ ಘೇಂಡಾವನ ಸುಮಾರು ಮೂವತ್ತೆಂಟು ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿದೆ.

ಇದರ ಒಳ ಹೊಕ್ಕರೆ, ಅಪ್ಪಟ ನಮ್ಮ ಪಶ್ಚಿಮ ಘಟ್ಟ ಅರಣ್ಯ ಪ್ರದೇಶವೇ. ೧೯೮೭ರಲ್ಲಿ ವನ್ಯಜೀವಿ ತಾಣವಾಗಿ ಗುರುತಿಸಿಕೊಂಡ, ಎಡಗಡೆಯಲ್ಲಿ ಅಗಾಧ ಜಲರಾಶಿಯಾದ ಬ್ರಹ್ಮಪುತ್ರ ಹಾಗು ಬಲ ಬದಿಗೆ ಕಾಡಿನ ದಟ್ಟತೆಯ ಮಧ್ಯೆ ಆನೆ ಬಿಡಾರದೊಂದಿಗೆ ರಕ್ಷಿತ ಘೇಂಡಾರಣ್ಯವನ್ನು ಪೋಷಿಸಲಾಗುತ್ತಿದೆ.

ಅಸ್ಸಾಂ ಪ್ರವಾಸೋದ್ಯಮ ಮತ್ತು ರಕ್ಷಿತಾರಣ್ಯ ಅಭಿವೃದ್ಧಿ ಪ್ರಾಧಿಕಾರ ವಾಣಿಜ್ಯಾತ್ಮಕವಾಗಿಯೂ ಇದನ್ನು ಬಳಸಿಕೊಳ್ಳುತ್ತಿದೆ. ಪ್ರವಾಸಿಗರಿಂದ ಸಾಕಷ್ಟು ಲಾಭದಾಯಕವಾಗಿ ಬೆಳೆಯುತ್ತಿರುವ ಸಫಾರಿಯ ಲಾಭದ ಬಾಬತ್ತು ಘೇಂಡಾರಣ್ಯದಲ್ಲಿ ಇನ್ನಷ್ಟು ಪ್ರೋತ್ಸಾಹಕರ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮಾಡಿದೆ. ಬರೀ ತೆರೆದ ವಾಹನದ ಸಫಾರಿ ಜೊತೆಗೆ, ದಿನದ ಮೊದಲರ್ಧ ಭಾಗದಲ್ಲಿ ಆನೆಯ ಸಫಾರಿ ಕೂಡಾ ಲಭ್ಯವಿದೆ.

ಆನೆಯ ತಾಂಡಾದಿಂದ ಬೆಳ್ಳಂಬೆಳಿಗ್ಗೆ ಆನೆಗಳನ್ನು ಹೊರಡಿಸುವ ಮಾವುತರು ಹನ್ನೆರಡು ಗಂಟೆಯವರೆಗೂ ಅನೆ ಸಫಾರಿ ಮಾಡಿಸುತ್ತಾರೆ. ಬಿಡಾರಕ್ಕೆ ಮರಳುವ ವೇಳೆಗಾಗಲೇ ಆನೆಗಳು ಕನಿಷ್ಠ ಐದೈದು ಸುತ್ತು ಸಂಚಾರ ಮುಗಿಸಿರುತ್ತವೆ. ಕೊನೆಯ ಅನೆಯ ಸಫಾರಿ ಹೊರಡುವುದು ಹನ್ನೆರಡು ಗಂಟೆಗೆ. ಅದರ ನಂತರ ಏನಿದ್ದರೂ ತೆರೆದ ಜೀಪಿನಲ್ಲಿ ಒಂದೂವರೆ ಗಂಟೆಯ ಪಯಣ. ಆದರೆ ಆನೆ ಸಫಾರಿ ಕಾಡಿನಲ್ಲಿ ಎಲ್ಲೆಂದರಲ್ಲಿ ನಡೆಯುವ ಸಫಾರಿಯಾದರೆ, ವಾಹನದ್ದು ನಿರ್ದಿಷ್ಟ ದಾರಿಯಲ್ಲಿ ಮಾತ್ರ ನಡೆಯುತ್ತದೆ.

ವಿಶಾಲವಾದ ಕೆರೆಯಂತೆ ಕಾಣಿಸುವ ಬ್ರಹ್ಮಪುತ್ರ ಹಿನ್ನೀರಿನಲ್ಲಿ ಸಾವಿರಾರು ಪೆಲಿಕಾನ್ ಮತ್ತು ನೂರಾರು ಪಕ್ಷಿ ಪ್ರಬೇಧಗಳು ಕಾಣಿಸುತ್ತವೆ. ಎರಡೂ ಕಡೆಯಲ್ಲಿ ಸ್ಥಳೀಯ ಬುಡಕಟ್ಟುಗಳ ಜಾನುವಾರಗಳು ರಕ್ಷಿತಾರಣ್ಯದಲ್ಲಿ ಸುಳಿದಾಡುತ್ತವೆ. ಜೀಪನ್ನು ನಿರ್ದಿಷ್ಟ ನೀರಿನ ಒಳ ಆವರಣದಲ್ಲಿ ನಿಲ್ಲಿಸುವ ವನಪಾಲಕ, ಮಾಹಿತಿಯ ಜೊತೆಗೆ ಪ್ರತಿ ಜೀಪಿಗೆ ಗನ್ ಮ್ಯಾನ್ ರಕ್ಷಣೆ ಒದಗಿಸುತ್ತಾನೆ.

ಅವನ ಸಂಜ್ಞೆಗೆ ಹೊಂದಿಕೊಂಡಿರುವ ಘೇಂಡಾಗಳು ಅಲ್ಲಲ್ಲಿ ನಿಂತು ಚಲಿಸುವುದು ಕುತೂಹಲಕಾರಿ. ಇನ್ನು ಮರಿಗಳೊಂದಿಗೆ ಬೀಡು ಬಿಟ್ಟು ಅಲ್ಲಲ್ಲಿ ಓಡಾಡಿಕೊಂಡಿರುವ ಘೇಂಡಾಗಳು ಕೆಲವೊಮ್ಮೆ ಜೀಪಿನ ಎದುರಿಗೇ ಬಂದು ತಂಡ ಕಟ್ಟಿಕೊಂಡು ನಿಂತು ಸತಾಯಿಸುವುದೂ ಇದೆ. ಆಗೆಲ್ಲ ಅನಿವಾರ್ಯವಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಅವನ್ನು ಚದುರಿಸುವ ಗನ್ ಮ್ಯಾನ್ ದಾರಿ ಸುಗಮವಾಗಿಸುತ್ತಾನೆ.

ಆದರೂ ಮರಿಗಳೊಂದಿಗೆ ಹಿಂಬಾಲಿಸುವ ಘೇಂಡಾ ಆಕಸ್ಮಿಕವಾಗಿ ಜೀಪನ್ನು ತಾಗಿದರೂ, ಅದು ಪಲ್ಟಿ ಹೊಡೆಯುವುದು ನಿಶ್ಚಿತ. ಆ ಕಾರಣಕ್ಕಾಗಿಯೇ ಘೇಂಡಾಗಳನ್ನು ಸುರಕ್ಷಿತ ಅಂತರದಲ್ಲೇ ನಿಲ್ಲಿಸಿಕೊಳ್ಳುತ್ತಾರೆ. ಆನೆಯ ಸಫಾರಿಯಲ್ಲಿ ಈ ಅಪಾಯಕ್ಕೆ ಆಸ್ಪದವಿಲ್ಲ.
ಆನೆಯೊಂದರ ಮೇಲೆ ನಾಲ್ಕೈದು ಜನರನ್ನು ಕೂರಿಸಿಕೊಳ್ಳುವ ಸಫಾರಿಯಲ್ಲಿ, ಜೀಪಿನಲ್ಲಾದರೆ ಒಮ್ಮೆಲೆ ಕುಟುಂಬ ಪೂರ್ತಿ ಸ್ನೇಹಿತರೊಂದಿಗೆ ಹೊರಡಬಹುದು. ಎಂಟ್ಹತ್ತು ಜನರಿಗೆ ನಿಲ್ಲುವ ಅವಕಾಶ ಇರುವ ಸಫಾರಿ ಜೀಪಿನ ಒಂದು ಸುತ್ತಿನ ಬಾಡಿಗೆ 1700 ರೂಪಾಯಿ.

ಪ್ರಸ್ತುತ ದೇಶದಲ್ಲಿ ಲಭ್ಯವಿರುವ ಘೇಂಡಾಗಳ ಸಿಂಹಪಾಲು ಹೊಂದಿರುವ ‘ಪೋಬಿತಾರ’ದಲ್ಲಿ ೯೩ ಘೇಂಡಾಗಳು ಜೀವಿಸಿವೆ. ಆವರಣದೊಳಗೇ ರೂಪುಗೊಳ್ಳುತ್ತಿರುವ ಮೊಸಳೆ ಪಾರ್ಕ್ ಇನ್ನೇನು ಪ್ರವಾಸಿಗಳಿಗೆ ತೆರೆದುಕೊಳ್ಳಲಿದೆ.

ಅಸ್ಸಾಂನ ಗವಾಹತಿಯಿಂದ ೪೮ ಕಿ.ಮೀ. ದೂರವಿರುವ ‘ಪೋಬಿತಾರ’, ಗವಾಹತಿಯಿಂದ ‘ಚಮ್ತಾ’ ಹಳ್ಳಿಯಿಂದ ಎಡಕ್ಕೆ ತಿರುವು ತೆಗೆದುಕೊಳ್ಳುತ್ತದೆ. ಇಲ್ಲಿಗೆ ಖಾಸಗಿ ಸಾರಿಗೆ ಮಾತ್ರ ಲಭ್ಯ. ಅಂದಹಾಗೆ, ಅಸ್ಸಾಂ ರಾಜ್ಯದಲ್ಲೆಲ್ಲೂ ಸರ್ಕಾರಿ ಸಾರಿಗೆ ನಂಬಿಕೊಳ್ಳುವಂತಿಲ್ಲ. ದಿನದ ಸಂಜೆಯ ಮೂರು ಗಂಟೆಗೂ ಮೊದಲೇ ತಲುಪಿದಲ್ಲಿ ತುಂಬ ಅನುಕೂಲ. ಕಾರಣ ಇಲ್ಲೆಲ್ಲ ಬೇಗ, ಎಂದರೆ ಐದು ಗಂಟೆಯ ಹೊತ್ತಿಗೆ ಕತ್ತಲಾವರಿಸುತ್ತದೆ, ಸಫಾರಿ ಕಾಡಿನೊಳಗೆ ಅದಕ್ಕೂ ಮೊದಲೇ ಕತ್ತಲಾವರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.