ನವಿ ಮುಂಬೈ: ಆರಂಭಿಕ ಬ್ಯಾಟರ್ ಫೊಯೆಬೆ ಲಿಚ್ಫೀಲ್ಡ್ ಗಳಿಸಿದ ಅಮೋಘ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡವು, ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ನಲ್ಲಿ ಭಾರತಕ್ಕೆ ಬೃಹತ್ ಗುರಿ ನೀಡಿದೆ.

ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸಿಸ್, ಮೊದಲು ಬ್ಯಾಟಿಂಗ್ ಮಾಡಿತು.

ಇನಿಂಗ್ಸ್ ಆರಂಭಿಸಿದ ನಾಯಕಿ ಅಲಿಸ್ಸಾ ಹೀಲಿ (5), ಸ್ವತಃ ವೈಫಲ್ಯ ಅನುಭವಿಸಿದರೂ, ಫೋಯೆಬೆ, ಎಲಿಸ್ ಪೆರ್ರಿ ಮತ್ತು ಅಶ್ಲೇ ಗಾರ್ಡ್ನರ್ ಮಿಂಚಿದರು. ಹೀಗಾಗಿ, ನಿಗದಿತ 50 ಓವರ್ಗಳಲ್ಲಿ ಆಲೌಟ್ ಆದರೂ 338 ರನ್ ಕಲೆಹಾಕಲು ಸಾಧ್ಯವಾಯಿತು.

ಎರಡನೇ ವಿಕೆಟ್ ಜೊತೆಯಾಟದಲ್ಲಿ 155 ರನ್ ಸೇರಿಸಿದ ಫೊಯೆಬೆ ಮತ್ತು ಪೆರ್ರಿ, ಭಾರತದ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದರು.

93 ಎಸೆತಗಳನ್ನು ಎದುರಿಸಿದ ಫೊಯೆಬೆ, 117 ರನ್ ಗಳಿಸಿದರು. ಅವರ ಇನಿಂಗ್ಸ್ನಲ್ಲಿ 17 ಬೌಂಡರಿ ಮತ್ತು 3 ಸಿಕ್ಸರ್ಗಳಿದ್ದವು. ಇದು, ಏಕದಿನ ಕ್ರಿಕೆಟ್ನಲ್ಲಿ ಅವರಿಗೆ ಮೂರನೇ ನೂರು. ಫೊಯೆಬೆಗೆ ಉತ್ತಮ ಸಹಕಾರ ನೀಡಿದ ಪೆರ್ರಿ, 88 ಎಸೆತಗಳಲ್ಲಿ 77 ರನ್ ಗಳಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಬೀಸಾಟವಾಡಿದ ಅಶ್ಲೇ ಗಾರ್ಡ್ನರ್, ಕೇವಲ 45 ಎಸೆತಗಳಲ್ಲೇ 63 ರನ್ ಗಳಿಸಿದರು. ಹೀಗಾಗಿ, ನಿಯಮಿತವಾಗಿ ವಿಕೆಟ್ಗಳನ್ನು ಕಳೆದುಕೊಳ್ಳುತ್ತಾ ಸಾಗಿದರೂ ಆಸಿಸ್, ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಭಾರತ ಪರ ಶ್ರೀಚರಣಿ ಹಾಗೂ ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಪಡೆದರು. ಅಮನ್ಜೋತ್ ಕೌರ್, ರಾಧಾ ಯಾದವ್ ಮತ್ತು ಕ್ರಾಂತಿ ಗೌಡ್ ಒಂದೊಂದು ವಿಕೆಟ್ ಕಿತ್ತರು.

ಶಫಾಲಿ ಮೇಲೆ ನಿರೀಕ್ಷೆಯ ಭಾರ
ಬಲಾಢ್ಯ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸುವುದು ಸವಾಲೇ ಸರಿ. ಲೀಗ್ ಹಂತದಲ್ಲಿ ಭಾರತ ನೀಡಿದ್ದ 331 ರನ್ಗಳ ಬೃಹತ್ ಗುರಿಯನ್ನು, ಆಸಿಸ್ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ತಲುಪಿತ್ತು. ಆ ಸೋಲು ಟೀಂ ಇಂಡಿಯಾದ ಆತ್ಮವಿಶ್ವಾಸವನ್ನೂ ಕುಂದಿಸಬಹುದು.

ಅಷ್ಟು ಮಾತ್ರವಲ್ಲದೆ, ಆ ಪಂದ್ಯದಲ್ಲಿ ಅಮೋಘ ಅರ್ಧಶತಕ ಸಿಡಿಸಿದ್ದ ಹಾಗೂ ಟೂರ್ನಿಯುದ್ದಕ್ಕೂ ಸ್ಮೃತಿ ಮಂದಾನ ಜೊತೆಗೆ ಉತ್ತಮ ಆರಂಭ ನೀಡುತ್ತಿದ್ದ ಪ್ರತೀಕಾ ರಾವಲ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲು ತಂಡದಲ್ಲಿ ಸ್ಥಾನ ಪಡೆದಿರುವ ಸ್ಫೋಟಕ ಶೈಲಿಯ ಬ್ಯಾಟರ್ ಶಫಾಲಿ ವರ್ಮಾ ಅವರ ಮೇಲೆ ನಿರೀಕ್ಷೆಯ ಭಾರವಿದೆ.

ಗೆದ್ದವರಿಗೆ ದಕ್ಷಿಣ ಆಫ್ರಿಕಾ ಸವಾಲು
ಭಾರತ, ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರುವ ಕನಸು ಕಾಣುತ್ತಿದೆ. ಆಸ್ಟ್ರೇಲಿಯಾ ಪಡೆ ಎಂಟನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಹೀಗಾಗಿ, ಇಂದಿನ ಹೋರಾಟದಲ್ಲಿ ಗೆದ್ದವರಿಗೆ, ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಸವಾಲು ಎದುರಾಗಲಿದೆ.

ಆಸ್ಟ್ರೇಲಿಯಾ ಪ್ರಸಕ್ತ ಟೂರ್ನಿಯಲ್ಲಿ ಅಜೇಯವಾಗಿ ನಾಲ್ಕರ ಘಟ್ಟ ತಲುಪಿದೆ. ಲೀಗ್ ಹಂತದಲ್ಲಿ ಆಡಿದ 7 ಪಂದ್ಯಗಳ ಪೈಕಿ ಆರರಲ್ಲಿ ಜಯದ ನಗೆ ಬೀರಿದೆ. ಶ್ರೀಲಂಕಾ ಎದುರಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆದರೆ, ಭಾರತ ತಂಡದ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ಏಳುಬೀಳುಗಳನ್ನು ಕಂಡು ಈ ಹಂತಕ್ಕೆ ಬಂದಿದೆ.
.ಮಹಿಳಾ ವಿಶ್ವಕಪ್ ಸೆಮಿಫೈನಲ್ ಇಂದು: ಕೌರ್ ಪಡೆಯ ಕನಸಿಗೆ ಆಸ್ಟ್ರೇಲಿಯಾ ಸವಾಲು.Womens WC: ಸೆಮಿಫೈನಲ್ನಲ್ಲಿ ಸೋತ ಇಂಗ್ಲೆಂಡ್; ಫೈನಲ್ಗೇರಿದ ದಕ್ಷಿಣ ಆಫ್ರಿಕಾ.
ಎಂಟು ವರ್ಷಗಳ ಹಿಂದೆ ಗೆದ್ದಿದ್ದ ಭಾರತ
2017ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಜಯಭೇರಿ ಬಾರಿಸಿ ಅಂತಿಮ ಸುತ್ತಿಗೆ ಲಗ್ಗೆ ಇಟ್ಟಿತ್ತು. ಈಗಿನ ನಾಯಕಿ ಹರ್ಮನ್ ಅವರು 115 ಎಸೆತಗಳಲ್ಲಿ ಅಜೇಯ 171 ರನ್ ಗಳಿಸಿ ಜಯ ತಂದುಕೊಟ್ಟಿದ್ದರು.

ಭಾರತದ ಅಭಿಮಾನಿಗಳು ಅಂತಹದೇ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.

ಹನ್ನೊಂದರ ಬಳಗ
ಭಾರತ: ಸ್ಮೃತಿ ಮಂದಾನ, ಶೆಫಾಲಿ ವರ್ಮಾ, ಅಮನ್ಜೋತ್ ಕೌರ್, ಹರ್ಮನ್ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ರಾದಾ ಯಾದವ್, ಕ್ರಾಂತಿ ಗೌಡ್, ಶ್ರೀ ಚರಣಿ, ರೇಣುಕಾ ಠಾಕೂರ್

ಆಸ್ಟ್ರೇಲಿಯಾ: ಅಲಿಸ್ಸಾ ಹೀಲಿ (ನಾಯಕಿ/ವಿಕೆಟ್ ಕೀಪರ್) ಫೊಯೆಬೆ ಲಿಚ್ಫೀಲ್ಡ್, ಎಲಿಸ್ ಪೆರ್ರಿ, ಬೆತ್ ಮೂನಿ, ಅನ್ನಾಬೆಲ್ ಸುಥರ್ಲ್ಯಾಂಡ್, ಅಶ್ಲೇ ಗಾರ್ಡ್ನರ್, ತಹ್ಲಿಯಾ ಮೆಗ್ರಾ, ಸೋಫಿ ಮೊಲಿನಿ, ಕಿಮ್ ಗರ್ತ್, ಅಲನಾ ಕಿಂಗ್, ಮೆಗನ್ ಸುಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.