ಶುಕ್ರವಾರ, ಮೇ 7, 2021
21 °C

ದೇಶದ ಭವಿಷ್ಯಕ್ಕಾಗಿ ಮತ್ತೊಂದು ಕ್ರಾಂತಿ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ದೇಶದ ಭವಿಷ್ಯಕ್ಕಾಗಿ ಯುವ ಜನತೆ ಮತ್ತೊಂದು ಅಹಿಂಸಾತ್ಮಕ, ಮೌನಕ್ರಾಂತಿಗೆ ಸಜ್ಜಾಗಬೇಕಿದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿ ದ್ಯಾಲಯದ ಕುಲಪತಿ ಡಾ. ಜೆ.ಎಸ್. ಪಾಟೀಲ ಹೇಳಿದರು.

ನಗರದ ಜಗದ್ಗುರು ಗಂಗಾಧರ ಪದವಿಪೂರ್ವ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಕ್ರೀಡಾ ಚಟುವಟಿಕೆ ಹಾಗೂ ವಿವಿಧ ಸಂಘಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಉಪವಾಸ ಎಂಬುದು ನಮ್ಮಳಗೆ ನಡೆಯುವಂತಹ್ದ್ದದು. ಜಮಖಾನ, ಪೆಂಡಾಲ್ ಹಾಕಿ ಉಪವಾಸ ಮಾಡಿದರೆ ಪ್ರಯೋಜನವಿಲ್ಲ. ಅಂತೆಯೇ ಕ್ರಾಂತಿ ಎನ್ನುವುದು ನಮ್ಮಿಂದ, ನಮ್ಮಳಗಿ ನಿಂದಲೇ ಶುರುವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.ಬುದ್ಧ, ಬಸವ, ಗಾಂಧಿಯವರ ಪ್ರತಿಮೆಯನ್ನು ಲೆಕ್ಕವಿಲ್ಲದಷ್ಟು ನಿರ್ಮಿ ಸಿದ್ದೇವೆ. ಆದರೆ ಅವರ ಆದರ್ಶ, ತತ್ವ ಗಳನ್ನು ಗಾಳಿಗೆ ತೂರಿದ್ದೇವೆ. ಇದು ದೇಶದ ದುರಂತ ಎಂದರು. ಸ್ವಾತಂತ್ರ್ಯಾನಂತರ ದೇಶದಲ್ಲಿ ಬೃಹತ್ ನೀರಾವರಿ ಯೋಜನೆಗಳು, ಕೈಗಾರಿಕೆಗಳು ಬಂದಿವೆ.ಇದರಿಂದಾಗಿಯೇ ಇಂದು ಪ್ರವಾಹ ಪರಿಸ್ಥಿತಿ ತಲೆದೋರಿದೆ. ಜಾಗತೀಕರಣದ ಹೆಸರಿನಲ್ಲಿ ಸ್ವರಾಜ್ಯ ಕಲ್ಪನೆಯನ್ನು, ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಐ.ಟಿ. ಬಿ.ಟಿ ಕ್ಷೇತ್ರ ಬೆಳೆದಂತೆ ನಮ್ಮ ಬದುಕು, ಸಂಸ್ಕೃತಿ ಬದಲಾಗುತ್ತಿದ್ದು, ಈ ಕುರಿತು ಗಂಭೀರ ಚಿಂತನೆ ನಡೆಯುವ ಅಗತ್ಯವಿದೆ ಎಂದರು. 21ನೇ ಶತಮಾನ ವೈಶ್ಯ ಯುಗವಾಗಲಿದೆ ಎಂದು ಅವರು ನುಡಿದರು. ಗಾಂಧಿ ತತ್ವ, ಸರಳ ರೀತಿಯ ಬದುಕನ್ನು ರೂಢಿಸಿಕೊಳ್ಳುವಂತೆ ವಿದ್ಯಾ ರ್ಥಿಗಳಿಗೆ ಸಲಹೆ ನೀಡಿದರು.ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಂ.ಎಸ್. ಬೆಂಬಳಗಿ ಅಧ್ಯ ಕ್ಷತೆ ವಹಿಸಿ ಮಾತನಾಡಿ, ಜಾಗತಿಕ ಬದ ಲಾವಣೆಗಳನ್ನು ವಿದ್ಯಾರ್ಥಿಗಳು ಗಮನಿ ಸಬೇಕು ಎಂದರು. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಓದಿನಷ್ಟೇ ಮಹತ್ವ ನೀಡಬೇಕು. ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಕಾರ್ಯಕ್ರಮದ ಅಂಗವಾಗಿ ಕಾಲೇ ಜಿನ ಗ್ರಂಥಾಲಯದಲ್ಲಿ ಮಹಾತ್ಮ ಗಾಂಧೀಜಿಯವರ ಪುಸ್ತಕಗಳ ಪ್ರದ ರ್ಶನ ಆಯೋಜಿಸಲಾಗಿತ್ತು. ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ರಂಗೋಲಿ ಸ್ಪರ್ಧೆ ಹಾಗೂ ಪದವಿ ವಿದ್ಯಾರ್ಥಿ ಗಳಿಗಾಗಿ ಫಲಪುಷ್ಪ ವಿನ್ಯಾಸ ಸ್ಪರ್ಧೆ ಆಯೋಜಿಸಲಾಗಿತ್ತು.ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕೆಎಲ್‌ಇ ಸಂಸ್ಥೆಯ ಹಳೆಯ ವಿದ್ಯಾರ್ಥಿ ಚಂದ್ರಶೇಖರ ಕಂಬಾರ ಅವರಿಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಪದವಿ ಮಹಾವಿದ್ಯಾ ಲಯ ಪ್ರಾಚಾರ್ಯ ಡಾ. ಆನಂದ ಮುಳಗುಂದ ಪ್ರಾಸ್ತಾವಿಕವಾಗಿ ಮಾತ ನಾಡಿದರು.ಪದವಿಪೂರ್ವ ಮಹಾವಿ ದ್ಯಾಲಯ ಪ್ರಾಚಾರ್ಯ ಪ್ರೊ. ಎಸ್.ಎ. ಗಣಿ, ಡಾ. ಜ.ಬಿ. ಬಳಿಗಾರ, ಪ್ರೊ. ವಿ.ಜಿ. ದೇವದಾಸ, ಪ್ರೊ. ಜನಗೌಡ, ವಿರೂಪಾಕ್ಷ ಹಿಪ್ಪರಗಿ, ಡಾ.ವಿ.ಆರ್. ಹಿರೇಮಠ, ಅನುಷಾ ಕುಡ್ವಾ ಹಾಗೂ ಇತರರು ಹಾಜರಿದ್ದರು.ಆನಂದ ತೀರ್ಥ ಗಂಡಮಾಲಿ ವಂದಿಸಿದರು. ಪ್ರೊ. ಎಂ.ಆರ್. ಶೆಟ್ಟರ ಲತಾ ಮಟ್ಟಿ ನಿರೂಪಿಸಿದರು. ವರದಾ ಕುಲಕರ್ಣಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.