ಸೋಮವಾರ, ಜನವರಿ 20, 2020
18 °C

ದೇಶದ ಮೊದಲ ಪತ್ರಿಕಾ ಛಾಯಾಗ್ರಾಹಕಿ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಡೋದರ (ಪಿಟಿಐ): ದೇಶದ ಮೊದಲ ಪತ್ರಿಕಾ ಛಾಯಾಚಿತ್ರಗ್ರಾಹಕಿ ಹೋಮಿ ವೈರವಾಲಾ (98) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.ಮೂರು ದಿನಗಳ ಹಿಂದೆ ಅವರು ತಮ್ಮ ಮಂಚದಿಂದ ಕೆಳಗೆ ಬಿದ್ದು, ಬೆನ್ನು ಮೂಳೆ ಮುರಿದುಕೊಂಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಯೋವೃದ್ಧರಾಗಿದ್ದ ಅವರಿಗೆ ಶಸ್ತ್ರಚಿಕಿತ್ಸೆ ಸಾಧ್ಯವಾಗಿರಲಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.ತಮ್ಮ ಮನೆಯಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದು ಕೊನೆಯ ದಿನಗಳವರೆಗೂ ಕ್ರಿಯಾಶೀಲರಾಗಿದ್ದರು. ಅವರ ಅಂತ್ಯ ಸಂಸ್ಕಾರ ಸೋಮವಾರ ನಡೆಯಲಿದೆ.ಕಳೆದ ವರ್ಷ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.ಅವರ ಪತಿ ಮಾಣಿಕ್ ಷಾ 1970ರಲ್ಲಿಯೇ ಮೃತಪಟ್ಟಿದ್ದರು. 1913ರ ಡಿಸೆಂಬರ್ ಒಂಬತ್ತರಂದು ದಕ್ಷಿಣ ಗುಜರಾತ್‌ನ ನವಸಾರಿ ಪಟ್ಟಣದ ಪಾರ್ಸಿ ಕುಟುಂಬದಲ್ಲಿ ಜನಿಸಿದ್ದ ಅವರು, ನಂತರ ಮುಂಬೈನ ಜೆಜೆ ಕಲಾ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು.1942ರಲ್ಲಿ ದೆಹಲಿಗೆ ಹೋಗಿ ವಾಸವಾಗಿದ್ದರು.ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳವಳಿ ಅಂತಿಮ ಘಟ್ಟದಲ್ಲಿದ್ದು, ಬ್ರಿಟಿಷ್ ವಾರ್ತಾ ಸೇವೆಯಲ್ಲಿ ಕೆಲಸಕ್ಕೆ ಸೇರಿದ್ದ ಅವರು ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಅನೇಕ ಅಮೂಲ್ಯ ಚಿತ್ರಗಳನ್ನು ತೆಗೆದಿದ್ದರು.

ಪ್ರಮುಖವಾಗಿ ಭಾರತ ವಿಭಜನೆಗೆ ಸಂಬಂಧಿಸಿದಂತೆ ಮುಖಂಡರು ಹಾಗೂ ಅಧಿಕಾರಿಗಳು ನಡೆಸಿದ ಸಭೆಯ ದೃಶ್ಯಗಳನ್ನು ಕ್ಲಿಕ್ಕಿಸಿದ್ದರು.1947ರ ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆ ಮೇಲೆ ಲಾರ್ಡ್ ಮೌಂಟ್ ಬ್ಯಾಟನ್ ಅವರು ಮೊದಲ ಬಾರಿಗೆ ತ್ರಿವರ್ಣ ಧ್ವಜಾರೋಹಣ ಮಾಡಿದ ಚಿತ್ರವನ್ನೂ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು.

ರಾಷ್ಟ್ರಪಿತ ಮಹಾತ್ಮಾ ಗಾಂಧಿ, ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಅಂತ್ಯಸಂಸ್ಕಾರದ ಚಿತ್ರಗಳನ್ನೂ ತೆಗೆದಿದ್ದರು.

ರಾಣಿ ಎಲಿಜಬೆತ್ ಹಾಗೂ ಅಮೆರಿಕ ಮಾಜಿ ಅಧ್ಯಕ್ಷ ಐಸೆನ್ ಹೊವರ್ ಅವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಛಾಯಾಚಿತ್ರ ತೆಗೆದಿದ್ದರು.1970ರಲ್ಲಿ ಅವರು ತಮ್ಮ ವೃತ್ತಿಯಿಂದ ನಿವೃತ್ತರಾದರು. ಕಳೆದ ವರ್ಷ ನಡೆದ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪತ್ರ ಬರೆದು ಶುಭಾಶಯ ಕೋರಿದ್ದರು.1930ರಲ್ಲಿ ವೃತ್ತಿ ಆರಂಭಿಸಿದ ಅವರು, ಮುಂಬೈ ಮಹಿಳಾ ಕ್ಲಬ್‌ನ ಪ್ರವಾಸದ ಸಂದರ್ಭದಲ್ಲಿ ಮೊದಲ ಚಿತ್ರ ತೆಗೆದಿದ್ದರು. `ಬಾಂಬೆ ಕ್ರಾನಿಕಲ್~ನಲ್ಲಿ ಅವರ ಮೊದಲ ಚಿತ್ರ ಮುದ್ರಣವಾಗಿತ್ತು. ಆಗ ಪ್ರತಿ ಚಿತ್ರಕ್ಕೆ ಒಂದು ರೂಪಾಯಿ ಸಂಭಾವನೆಯನ್ನು ನೀಡುತ್ತಿದ್ದರು.

 

ಪ್ರತಿಕ್ರಿಯಿಸಿ (+)